ಬುಧವಾರ, ಆಗಸ್ಟ್ 10, 2011

This is stream of reactions on my article at Kendasampige.com

"ಸ್ವಯಂ ಸಂತೋಷ ಹೆಗಡೆಯವರೇ ತಾವು ನೀಡಿರುವ ೨೫,೮೨೨ ಪುಟಗಳ ವರದಿಯನ್ನು ಸಂಪೂರ್ಣವಾಗಿ ಓದಿದ್ದಾರೆಯೇ? ಎಂಬ ಬಗ್ಗೆಯೂ ನನಗೆ ನನ್ನದೆ ಆದ ಅನುಮಾನಗಳಿವೆ." - ತರ್ಕ ಬಲ್ಲವರು ಇಲ್ಲದಿದ್ದರೆ ತಮ್ಮ ಈ ಮಾತನ್ನು ಫಕ್ಕನೆ ಎತ್ತಿಕೊಂಡು ಸಂತೋಷ ಪಡುವ ಅಪಾಯವಿದೆ. ನೆನಪಿಡಿ, ಲೋಕಾಯುಕ್ತ ಎನ್ನುವುದು ಒಂದು ಸಂಸ್ತೆ, ಹಾಗೂ ಅದರಲ್ಲಿ ಸಂತೋಷ್ ಹೆಗ್ಗಡೆ ಮುಖ್ಯಸ್ತರು, ಅದರ ಅರ್ಥ, ಲೋಕಾಯುಕ್ತ ಸಂಸ್ಥೆ ಆ ವರದಿಯನ್ನು ಓದಿ+ಸಿದ್ದಪದಿಸಿದ್ದರೆ ಸಾಕು, ಹೆಗ್ಗದೆಯವರೇ ೨೫,೦೦೦ ಪುಟಗಳಷ್ಟನ್ನು ಹೈಸ್ಕೂಲು ವಿದ್ಯಾರ್ಥಿಯಂತೆ ಬಿಂದು-ಬಿಂದು ಓದಬೇಕಾದ ಅಗತ್ಯ ಇಲ್ಲ. "ರಾಜಕೀಯವಾಗಿಯೂ ಸಾಕಷ್ಟು ನಿಸ್ಪೃಹತೆ ಹಾಗೂ ಪ್ರಾಮಾಣಿಕತೆಗಳನ್ನು ಇಟ್ಟುಕೊಂಡವರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಕುರಿತ ಅವರ ಆರೋಪ ಕೇವಲ ಕುಹಕ ಎಂದು ಯಾರೂ ತಳ್ಳಿ ಹಾಕುವಂತಿಲ್ಲ." ಮತ್ತೆ ತರ್ಕಕ್ಕೆ ಅಕ್ಷರ-ಸ್ಖಲನವಾದಂತಿದೆ!. ಜೀವನದಲ್ಲಿ ಒಂದೇ ಒಂದೂ ಕೊಲೆ ಮಾಡದ ಓರ್ವ ಹುಡುಗಿ ತನ್ನ ಮದುವೆಯಾಗುವವನನ್ನು ವಿನಾ ಕಾರಣ ಕೊಂದು ಹಾಕಿದ ಘಟನೆ ಈಗ ಕೆಲವು ವರ್ಷಗಳ ಹಿಂದೆ ನಡೆದು ಹೋಯಿತು. ನಿಸ್ಪ್ರುಹತೆ ಹಾಗೂ ಬ್ರಷ್ಟಾಚಾರ ಎರಡೂ ನ್ಯೂಟನ್ ನಿಯಮ ಪಾಲಿಸಲಾರವು ಅಲ್ಲವೇ? "ನಾಲ್ವರು ಕುರುಡರು ಆನೆಯೊಂದನ್ನು ಮುಟ್ಟಿ ವರ್ಣಿಸಿದ ಕತೆ ನೀವೆಲ್ಲರೂ ಕೇಳಿಯೇ ಇದ್ದೀರಿ", ಅಹುದು!, ಕುರುದರಿಗೂ ಕೂಡ ಗೋಚರವಾಗುವಷ್ಟು ಬ್ರಹ್ಮಾಂಡ ಬ್ರಷ್ಟಾಚಾರ ನಡೆದಾಗ ಈ ರೂಪಕವೆ ಅರ್ಥ ಕಳೆದುಕೊಳ್ಳುತ್ತದೆ. ತಾವು ಕಸುಬುದಾರಿಕೆಯ ಜೊತೆಗೆ ಒಂದಷ್ಟು ಸಮಗ್ರವೆನಿಸುವ ಸಾಮಾಜಿಕ ಕಾಳಜಿ-ಪರಿಣಾಮಗಳ ಅವಗಾಹನೆಯನ್ನು ಬೆಳೆಸಿಕೊಳ್ಳಿ ಎನ್ನುವುದು ನನ್ನ ವಿನಮ್ರ ಸೂಚನೆ!-Dr.D.M.Sagar...
Guest | 06 Aug 2011 07:19 pm | Reply »
Re: Dr Sagar sir, I too have high regards for Santhosh Hegde. But My intention was only to highlight how this office was used to nail Yeddiyurappa. I am writing a separate rejoinder to answer all your doubts. thanks for response. Siddartha.
Guest | 09 Aug 2011 01:30 pm
ಪ್ರಿಯ ಸಿದ್ದಾರ್ಥ ಅವರೇ, ನಮಸ್ಕಾರ. ನಿಮ್ಮ ಎಲ್ಲಾ ಲೇಖನಗಳನ್ನು ಓದುತ್ತಿದ್ದೇನೆ. ಯಾವತ್ತೂ ಇಷ್ಟೊಂದು ನಿರಾಶೆ ಆಗಿರಲಿಲ್ಲ ನನಗೆ. ಕಳೆದ ಎರಡು-ಮೂರು ವಾರಗಳಲ್ಲಿ ನಡೆದ ರಾಜಕೀಯ ಮೇಲಾಟಗಳ ಬಗ್ಗೆ ಒಂದು ಸ್ಪಷ್ಟ ಚಿತ್ರ ಕಲ್ಪಿಸಿಕೊಳ್ಳಲು ಯಾರಿಗಾದರೂ ಅಂಥಾ ಮಹತ್ತರವಾದ ರಾಜಕೀಯ ಒಳನೋಟಗಳೇನೂ ಬೇಕಿದ್ದಂತಿರಲಿಲ್ಲ. ಅಷ್ಟೊಂದು ಸರಳ ಸತ್ಯಗಳು ಕಣ್ಣಿಗೆ ರಾಚುತ್ತಿದ್ದವು ಈ ವಿಚಾರದಲ್ಲಿ. ತಾವು ಅಡ್ವಾಣಿಜೀ ಹಾಗೂ ಸಂತೋಷ್ ಹೆಗ್ಡೆಯವರ ನಡುವಿನ ಯಾವುದೋ ಭಾವನಾತ್ಮಕ ಸಂಬಂಧದ ಎಳೆ ಹಿಡಿದು ಏನೋ ಮಹಾ ರಹಸ್ಯವೊಂದು ತಟ್ಟನೆ ಹೊಳೆದವರಂತೆ "ಯುರೇಕಾ-ಯುರೇಕಾ" ಎನ್ನಲು, ನೀವದನ್ನು ನಂಬಿರುವಷ್ಟು ಗಂಭೀರವಾಗಿ ಉಳಿದವರೂ ಪರಿಭಾವಿಸಬೇಕೆಂದು ತಿಳಿಯಲು, ಅದರಲ್ಲಿ ಅಂಥಾ ಗಟ್ಟಿ ಆಧಾರಗಳೇನೂ ಇಲ್ಲ ಎಂಬುದು ಎಲ್ಲೋ ಆಳದಲ್ಲಿ ತಮಗೂ ಗೊತ್ತೇ ಇದೆ- ಸ್ವಲ್ಪ ಧೈರ್ಯದಿಂದ ಒಪ್ಪಿಕೊಳ್ಳಬೇಕಾಗಬಹುದು ಅಷ್ಟೆ. ಇವತ್ತು ಬಿಜೆಪಿಯಲ್ಲಿ ಒಂದಿಷ್ಟು ನೈತಿಕತೆ ಎನ್ನುವುದನ್ನೇನಾದರು ಇಟ್ಟುಕೊಂಡವರಿದ್ದರೆ ಅದು ಮಾನ್ಯ ಆಡ್ವಾನೀಜೀ ಅಂತಹವರು ಮಾತ್ರ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅದು ತಮಗೂ ಗೊತ್ತಿದೆ. ಒಂದೊಮ್ಮೆ ಅವರು ಯಡಿಯೂರಪ್ಪನವರ ರಾಜೀನಾಮೆಗೆ ಬಲವಾಗಿ ಆಗ್ರಹ ಮಾಡಿದ್ದರೆಂದೇ ಇಟ್ಟುಕೊಳ್ಳೋಣ. ಅದು "ಯಾವುದೋ ಹುನ್ನಾರ"ವೆಂಬಂತೆ ಧ್ವನಿಸುವ ರೀತಿಯ ವಾಕ್ಯಗಳಿರುವ ತಮ್ಮ ಲೇಖನದ ಉದ್ದೇಶವಾದರೂ ಏನು ಸರ್? ರಾಜ್ಯದ ಜನರೆಲ್ಲಾ ಏನೂ ತಿಳಿಯದ ಅಥವಾ ತಿಳಿದರೂ ಏನೂ ಮಾಡಲಾಗದ ಮೂರ್ಖರು ಎಂಬಂತೆ ಆಡಳಿತ ನಡೆಸುತ್ತಿದ್ದ ಯಡಿಯೂರಪ್ಪನವರು, ಅರೆ ನ್ಯಾಯಾಂಗ ಸಂಸ್ಥೆಯೊಂದು ಕಣ್ಣಿಗೆ ರಾಚುವಂಥಾ ಸತ್ಯಗಳನ್ನು ರಾಜ್ಯದ ಜನರೆದುರು ಹಿಡಿದಾಗಲೂ ನೈತಿಕತೆಗೆ ಬಗ್ಗದಷ್ಟು ಸಂವೇದನಾರಹಿತರಾದ-ಜಗಮೊಂಡ ಯಡಿಯೂರಪ್ಪನವರು, ಅಧಿಕಾರದಿಂದ ಇಳಿಯಲೇಬೇಕಾಗಿ ಬರುವಂತೆ ಸನ್ನಿವೇಶವೊಂದು ಯಾರಿಂದಲೋ- ಅದೂ ಉದ್ದೇಶಪೂರ್ವಕವಾಗಿಯೇ ಸೃಷ್ಟಿಯಾಗಿದ್ದರೂ..... ಸರ್, ಒಂದಿಷ್ಟು ಸಮಾಜ ಬದ್ಧತೆ ಹೊಂದಿದವರಾಗಿ ಖುಷಿಪಡುವುದು ತಮ್ಮ ಧರ್ಮವಲ್ಲವೇ?. ನಿಮ್ಮ ವಿಭಿನ್ನ ರೀತಿಯ ಬರಹಗಳಿಗಾಗಿ ನಿಮ್ಮ ಅಭಿಮಾನಿಯಾಗಿ ನಾನೂ ಕಾದಿರುತ್ತೇನೆ. ಆದರೆ ಆ ವಿಭಿನ್ನ ಧಾಟಿ ಈ ವಿಚಾರದಲ್ಲಿ ಬೇಕಿರಲಿಲ್ಲ. ಈಗ ಇಷ್ಟೆಲ್ಲಾ ಆದರೂ, ಎಂಥಾ ಪ್ರಕಾಂಡ ರಾಜಕೀಯ ಪಟ್ಟುಗಳನ್ನು ಪ್ರಯೋಗಿಸಿ ಇನ್ನೂ ತನ್ನ ಅಸ್ತಿತ್ವವನ್ನು-ರಾಜಕೀಯ ಪ್ರಭಾವಳಿಯನ್ನು-ಶಕ್ತಿಶಾಲಿ ನಿಯಂತ್ರಣವನ್ನು ಅಧಿಕಾರ ಕೇಂದ್ರದ ಮೇಲೆ ಉಳಿಸಿಕೊಂಡಿದ್ದಾರೆ ಆ ರಾಜಕೀಯ ಮಹಾರಥಿ ಎಂದರೆ, ಒಂದಿಷ್ಟೇ ಇಷ್ಟು ರಾಜಕೀಯ ಅನುಕಂಪ ಸಿಕ್ಕರೂ ಸಾಕು...ಇಡಿಯಾಗಿ ವ್ಯವಸ್ಥೆಯ ಒಳಹೊಕ್ಕು ಆಳ ಬೇರಿಳಿಸಿ ಕೂತುಬಿಡುವ- ಕೂತ ಅಡಿಯನ್ನೇ ನುಂಗಿಬಿಡುವ ಬ್ರಹ್ಮಾಂಡ ದಾಹ ಹೊಂದಿದ್ದಾರವರು! ಇಂಥಾ ಹೊತ್ತು ಇಷ್ಟೊಂದು ಕನಿಕರ ಅಗತ್ಯವೇ ಸರ್? ಯೋಚಿಸಿ.... ಇನ್ನು ಬಿ.ಕೆ. ಹರಿಪ್ರಸಾದ್ ವಿಚಾರ. ಹಾಗೆ ನೋಡಿದರೆ ಇವತ್ತು ರಾಜ್ಯ ಕಾಂಗ್ರೆಸ್ ನಲ್ಲಿ ಉಳಿದುಕೊಂಡಿರುವ ಬೆರಳೆಣಿಕೆಯ ಅಷ್ಟೋ-ಇಷ್ಟೋ ಪ್ರಾಮಾಣಿಕರನ್ನೆಲ್ಲ ಒಂದು ಮೂಲೆಯ ನೆಲದಲ್ಲೇ ಕೂತಿದ್ದು ನಾಟಕ ನೋಡುವಂತೆ ವ್ಯವಸ್ಥೆಗೊಳಿಸಿರುವ ಪುಣ್ಯಾತ್ಮರಲ್ಲೊಬ್ಬರು ಈ ವ್ಯಕ್ತಿ! ಮಾನ್ಯ ಸಂತೋಷ್ ಹೆಗ್ಡೆಯವರ ಬಗ್ಗೆ ಪದೇಪದೇ ವಾಗ್ದಾಳಿ ನಡೆಸುವುದಕ್ಕೆ ಯಾವ ಜನಪರ ಘನ ಉದ್ದೇಶವೂ ಕಾರಣವಾಗಿರಲಿಲ್ಲ ಎಂಬುದು ಅತ್ಯಂತ ಸರಳವಾದ ಸಂಗತಿ. ಕೆಲವು ದಿನಗಳ ಹಿಂದೆ ( ಮತ್ತು ಈಗಲೂ) ಅಣ್ಣಾ ಹಜಾರೆ ಟೀಂ ಮೇಲೆ ಇವರು ಬಿಟ್ಟೂ ಬಿಡದೆ ನಡೆಸುತ್ತಿದ್ದ ದಾಳಿ ಯಾರ ಮೆಚ್ಚುಗೆ ಗಳಿಸುವುದಕ್ಕೆ ಎಂದು ಅರ್ಥ ಮಾಡಿಕೊಳ್ಳುವುದು ಅಷ್ಟು ಕಷ್ಟಕರವೇನೂ ಅಲ್ಲ. ಹೋಗಲಿ, ಈ ವಿಚಾರವನ್ನೇ ತಳುಕು ಹಾಕಿ, ವೃಥಾ ಸಂತೋಷ್ ಹೆಗ್ಡೆಯವರನ್ನು ಅನುಮಾನಿಸುವುದು ಅಷ್ಟೊಂದು ವಿಹಿತವಲ್ಲ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ. ಕೊನೆಯದಾಗಿ- ಸಿದ್ದಾರ್ಥ ಸರ್, ತಮ್ಮಷ್ಟು ಕ್ಷೇತ್ರಪರಿಚಯ ಹೊಂದಿಲ್ಲವಾದರೂ, ನನ್ನ ಸಾಮಾನ್ಯ ಜ್ಞಾನಕ್ಕೆ ನಿಲುಕಿರುವ ವಿಚಾರವನ್ನಷ್ಟೇ ಪ್ರಸ್ತಾಪಿಸಿದ್ದೇನೆ. ತಪ್ಪಿರಲಾರದು ಎಂಬ ನಂಬಿಕೆ ನನ್ನದು.. --ದಿನೇಶ್ ಕುಕ್ಕುಜಡ್ಕ...
Guest | 06 Aug 2011 03:39 pm | Reply »
Re: ಕೇವಲ ಬೆರಳೆಣಿಕೆಯ ಸ್ಥಾನ ಗಿಟ್ಟಿಸುತ್ತಿದ್ದ ಪಕ್ಷದ “ವರ್ಚಸ್ಸು” ಏಕಾಏಕಿ ಹೆಚ್ಚವಂತಾಗಲು ಕಾರಣರಾದ ಅಡ್ವಾಣಿ, ಪಧಾನಿ ಕುರ್ಚಿಯ ಕನಸು ಕಂಡಲ್ಲಿ ತಪ್ಪೇನಿದೆ?
Guest | 09 Aug 2011 03:00 pm
Re: Dear Dinesh. Thanks for your kind opinion on me. I am writing a separate rejoinder to reply those doubts you expressed. I am writing more about congress and its leaders in the comind days. thanks. Siddartha
Guest | 09 Aug 2011 01:23 pm
Re: ದಕ್ಷಿಣ ಭಾರತದಲ್ಲಿ ಗದ್ದುಗೆಗೇರಲು ಆವತ್ತು ಯಡಿಯೂರಪ್ಪ ಎಂಬ ಏಣಿಯ ಸಹಾಯ (ಸರಿ ದಾರಿಯೋ- ಅಡ್ಡದಾರಿಯೋ ಅದು ಬೇರೆ) ಬೇಕಿತ್ತು. ಆದರೀಗ ಏರಿಯಾದ ಮೇಲೆ ಏಣಿಯ ಹಂಗೇಕೆ ಸ್ವಾಮೀ...?
Guest | 09 Aug 2011 10:08 am
Re: ......ಇವತ್ತು ಬಿಜೆಪಿಯಲ್ಲಿ ಒಂದಿಷ್ಟು ನೈತಿಕತೆ ಎನ್ನುವುದನ್ನೇನಾದರು ಇಟ್ಟುಕೊಂಡವರಿದ್ದರೆ ಅದು ಮಾನ್ಯ ಆಡ್ವಾನೀಜೀ ಅಂತಹವರು ಮಾತ್ರ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ..... ಅಡ್ವಾನಿಯವರ ನೈತಿಕತೆ...? ಈ ಸತ್ಯ ತುಂಬಾ ತಮಾಷೆಯಾಗಿದೆಯಲ್ಲ ದಿನೇಶ್ ಅವರೇ...!!? ಕರ್ನಾಟಕದ ಇತ್ತೀಚೆಗಿನ ರಾಜಕೀಯ ರಾದ್ಧಾಂತಗಳಿಗೆ ರಾಜಕಾರಣಿಗಳನ್ನೂ ಸೇರಿ ಹೆಚ್ಚಿನವರು ದೂರುವುದು ಬೀಜೆಪಿ ಹೈಕಮಾಂಡನ್ನೆ. ಕಾರಣ ಈ ಪಾಪದ ಹಣದಲ್ಲಿ ಅವರುಗಳೂ ಪಾಲುದಾರರೆಂದು (ಈ ಕಾರಣಕ್ಕೇ ನಮ್ಮ ಮಾಜಿ ಸಿಯೆಂ ಅವರ ಮಾತುಗಳನ್ನು ಧಿಕ್ಕರಿಸುವಂತ ಮಹಾನ್ ದೈರ್ಯ ತೋರಿದ್ದು) ಎಲ್ಲರಿಗೂ ಗೊತ್ತಿದೆ. ಬಿಜೇಪಿಯಲ್ಲಿ ಸಚ್ಛಾರಿತ್ಯವಂತರು ಇಲ್ಲವೆಂದಲ್ಲ ಬೆಕಷ್ಟಿದ್ದಾರೆ ಆದರೆ ಒಂದು ಕಾಲದಲ್ಲಿ ಮತೀಯ ಭಾವನೆಕೆರಳಿಸಿ ಆಮೂಲಕ ಪಕ್ಷ ಗದ್ದುಗೆಗೇರಲು ಮುಖ್ಯ ಕಾರಣರಾಗಿದ್ದ ಅಡ್ವಾಣಿಜಿ ಇದೀಗ ತನ್ನೆಲ್ಲ ತತ್ವಗಳಿಗೆ ತದ್ವಿರುದ್ಧವಾಗಿ ಸುಭಗತನದ ಪೋಸುಗಳನ್ನು ನೀಡುತ್ತಿರುವುದು ಹೊಸ ಸಂಗತಿಯೇನಲ್ಲ. ಹಿಂದುತ್ವಕ್ಕಾಗೇ ಹೋರಾಡಿದ ಅವರೇ ನಂತರ ಸಂಪೂರ್ಣ ಹಿಂದು ರಾಷ್ಟ್ರದ ಕಲ್ಪನೆ ಸರಿಯಲ್ಲ ಎಂಬ ಮಾತಾಡಿ ಅವರ ಗೆಳೆಯರ ಕೆಂಗಣ್ಣಿಗೆ ತುತ್ತಾಗಿದ್ದರು. ಅವಶ್ಯವಿಲ್ಲದಿದ್ದರೂ ಕೂಡ ಜಿನ್ನಾರನ್ನು ಹೊಗಳುವಂತಾ ಮಟ್ಟಕ್ಕೂ ಈ ಹಾರ್ಡ್ ಕೋರ್ ಹೋರಾಟಗಾರ ಇಳಿದಿದ್ದರು. ನಾನು ಅಡ್ವಾನಿಯವರನ್ನು ಮೆಚ್ಚುವುದು ಒಂದೇ ಕಾರಣಕ್ಕೆ ೮೦+ ರ ಈ ವಯಸ್ಸಿನಲ್ಲೂ ಅವರ ಸದ್ರಢ ಆರೋಗ್ಯವನ್ನು ಒಂದೋ ಮೆಚ್ಚಬೇಕು ಇಲ್ಲಾ ಹೊಟ್ಟೆಕಿಚ್ಚುಪಡದೇ ಬೇರೆ ದಾರಿಯಿಲ್ಲ ಅಂತಾ ಅದ್ಭುತ ಶರೀರವುಳ್ಳ ವ್ಯಕ್ತಿ ಅವರು. ಬಿಜೆಪಿಯ ಪ್ರಧಾನಿ ಪಟ್ಟದ ಉತ್ತರಾಧಿಕಾರಿಯಾಗಿರುವ ಅಡ್ವಾಣಿಜಿಗೆ ಅಧಿಕಾರವಿಲ್ಲದೇ ಏನೂ ಮಾಡಲು ಸಾದ್ಯವಿಲ್ಲವೆಂಬ ಅರಿವಿದೆ. ತಮ್ಮ ಕನಸನ್ನು ನನಸಾಗಿಕೊಳ್ಳಲು ಪಕ್ಷದ ತಾತ್ಕಾಲಿಕ ಕ್ಲೀನ್ ಇಮೇಜಿಗಾಗಿ ಯಡಿಯೂರಪ್ಪರನ್ನು ವಿರೋಧಿಸಿದ್ದಾರಷ್ಟೆ. ಭೃಷ್ಟಾಚಾರದ ವಿರುದ್ಧ ನಿಜಕ್ಕೂ ಅವರಿಗೆ ಸಿಟ್ಟಿದ್ದರೆ ಅಕ್ರಮ ಗಣಿ ದುಡ್ಡಿನ ನೆರವಿಂದ ಅಧಿಕಾರಕ್ಕಾಗಿ ಕೈಗೊಳ್ಳಲಾದ ಅಪರೇಶನ್ ಕಮಲವನ್ನು ಆರಂಭದಲ್ಲೇ ಅವರು ವಿರೋಧಿಸುತ್ತಿದ್ದರು ಖಂಡಿತ. ಅಭಾವ ವೈರಾಗ್ಯವನ್ನೇ “ಮಹಾನ್” ಎನ್ನುತ್ತಿರುವುದು ತಮಾಷೆಯಾಗಿದೆ
Guest | 08 Aug 2011 03:07 pm
Re: ದಿನೇಶ್ ರ ವ್ಯಂಗ್ಯಚಿತ್ರಗಳ ಅಭಿಮಾನಿ ನಾನು. ಚಿತ್ರಗಳ ರಚನೆಯಲ್ಲಷ್ಟೇ ಅಲ್ಲ ದಿನೇಶರಿಗೆ ಬರವಣಿಗೆಯಲ್ಲೂ ಕೂಡ ಒಳ್ಳೆ ಹಿಡಿತವಿದೆ.
Guest | 08 Aug 2011 02:29 pm
What's wrong in article?....I dont see any flaws in it......all the anti-yaddi media and even opposition parties asked for Yaddi resignation only, not to dissolve BJP Govt......bcos even for central BJP members M factor reqd from karnataka........and even all 122 state BJP MLAs accepted Sureshkumar as CM they wouldn't have approved, bcos they dont want to keep a person who simply bribe central BJP......................................................As a true kannadiga yaddi has sent messages to everyone sitting at delhi........yaddi along with all localites(including shettar, eswarappa etc.) has made the party to win and form govt in karnataka.....NOT ADWANI, NOT RAJNATH, NOT JAITLEY, NOT SUSHMA, NOT NAIDU........so, why we kannadigas listen to someone sitting at delhi?................................................................................shivaprakash...
Guest | 05 Aug 2011 11:15 am | Reply »
Re: Thanks Shivaprakash for your encouraging words.- Siddartha
Guest | 09 Aug 2011 01:31 pm
ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಬಗ್ಗೆ ರಾಜಕಾರಣಿಗಳು ಕೀಳು ಭಾಷೆಯಲ್ಲಿ ಮಾತಾಡಿದರೂ ಜನಸಾಮಾನ್ಯರು ಹೆಗಡೆಯವರ ಮಾತನ್ನು ನಂಬುತ್ತಾರೆ. ಏಕೆಂದರೆ ಹೆಗಡೆಯವರು ಸರಳ ಜೀವಿ, ಯಾವುದೇ ಅಸ್ತಿ ಪಾಸ್ತಿ ಸಂಪಾದಿಸಿಲ್ಲ, ಅವರಿಗೆ ಮಕ್ಕಳೂ ಇಲ್ಲ. ಹೀಗಾಗಿ ಅವರಿಗೆ ಅಸ್ತಿ ಪಾಸ್ತಿ ಕೂಡಿಹಾಕಬೇಕಾದ ಅಗತ್ಯವೂ ಇಲ್ಲ. ರಾಜಕೀಯಕ್ಕೆ ಬರುವುದಿಲ್ಲ ಎಂದೂ ಹೇಳಿದ್ದಾರೆ. ಹೀಗಾಗಿ ಸಂತೋಷ್ ಹೆಗ್ಡೆಯವರನ್ನು ನಂಬದಿರಲು ಕಾರಣವಿಲ್ಲ. ವಾಸ್ತವವಾಗಿ ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಹೆಗ್ಡೆಯವರ ವರದಿಯೇ ಬೇಕಾಗಿಲ್ಲ. ರಾಜ್ಯದ ಗಣಿ ಲೂಟಿ ನಡೆಯುತ್ತಿರುವ ಪರಿ ನೋಡಿದರೆ ಯಾವ ಮೂರ್ಖನಿಗೂ ಇದು ಅರ್ಥವಾಗುವಂತದ್ದು. ಯಾವುದೇ ಆಮಿಷಕ್ಕೂ ಬಗ್ಗದೆ ಹೆಗ್ದೆಯರು ಕೆಲಸ ಮಾಡಿದ್ದರೆ ಎಂಬುದರಲ್ಲಿ ಸಂದೇಹವೇ ಬೇಡ. ಇದಕ್ಕಾಗಿ ಹೆಗಡೆಯವರಿಗೆ ರಾಜ್ಯದ ಜನ ಕೃತಜ್ಞರಾಗಿರಬೇಕು....
Guest | 05 Aug 2011 10:25 am | Reply »
I have been noticing Sidharth's articles. He seem to be more interested in attracting attention by concating his own conspiracy theories and by making a contrasting point of view. He does not come across like a dependable source to me....
Guest | 05 Aug 2011 03:03 am | Reply »
ಕರ್ನಾಟಕದ ಪತ್ರಿಕೋದ್ಯಮವನ್ನು ತೆಗಳುತ್ತಾ ಅದೇ ರೀತಿಯ ಪತ್ರಿಕೋದ್ಯಮವನ್ನು ಇಲ್ಲಿ ಲೇಖಕರು ನಡೆಸಿದ೦ತಿದೆ. ಆಳಕ್ಕಿಳಿಯದೆ, ಒಟ್ಟು ಪ್ರಹಸನದಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಚಾರ ಯಾವುದು ಅ೦ತ ಪರಿಗಣಿಸದೆ ಹರಿಪ್ರಸಾದ್ ಅವರನ್ನು ನೇರವಾಗಿ ಹೊಗಳುತ್ತಾ, ಸ೦ತೋಷ್ ಹೆಗ್ಡೆಯವರನ್ನು ಪರೊಕ್ಷವಾಗಿ ತೆಗಳುತ್ತಾ, ಕೇವಲ ಸಾ೦ಧರ್ಭಿಕ ಸಾಕ್ಷ್ಯಗಳನ್ನು ಹುಡುಕುತ್ತಾ ಸಾಗುವ ಈ ಲೇಖನ ಕೆ೦ಡಸ೦ಪಿಗೆ ಪ್ರಕಟಿಸಬಾರದಿತ್ತು. ಬಿ.ಕೆ. ಹರಿಪ್ರಸಾದ್ ತಮ್ಮ ಪೂರ್ವಾಶ್ರಮದಲ್ಲಿ ಗು೦ಡುರಾಯರ ಶಿಶ್ಯರು, ಪ್ರಜಾವಾಣಿ ಪತ್ರಿಕೆಯ ಗೇಟ್ ಗೆ ಬೀಗ ಹಾಕಿ ಸ್ವಾಮಿನಿಷ್ಠೆ ಮೆರೆದವರು, ಆ ನ೦ತರ ಸೋನಿಯಾ ಗಾ೦ಧಿಯವರ ಪ್ರಭಾವದಿ೦ದ ಸ್ವಲ್ಪ ಸುಬಗ ನಾಯಕರ೦ತೆ ಇದ್ದರು. ಇದ್ದಕ್ಕಿ೦ದ್ದ೦ತೆ ಏನಾಯಿತು ಗೊತ್ತಿಲ್ಲ. ಅವರು ಅಣ್ಣಾ ಹಜಾರೆ ಮತ್ತು ಸ೦ತೋಷ್ ಹೆಗ್ಡೆಯವರ ವಿಚಾರದಲ್ಲಿ ನೀಡಿರುವ ಹೇಳಿಕೆಯಿ೦ದ ತಿಳಿದು ಬರುವುದೇನೆ೦ದರೆ ಒ೦ದೋ ಅವರು ಇನ್ನೂ ಅಪ್ರಬುದ್ಧರು, ಇಲ್ಲವೇ ಅವರು ಯಾರದ್ದೋ ಕೀಳು ದಾಳವಾಗಿ ವರ್ತಿಸುತಿದ್ದಾರೆ. ಹಾಗೆ೦ದು ಅಣ್ಣಾ ಹಜಾರೆ ಅಥವಾ ಸ೦ತೋಷ್ ಹೆಗ್ಡೆ ಯವರನ್ನು ಯಾರೂ ಕಣ್ಣು ಮುಚ್ಚಿ ಒಪ್ಪಿಕೊಳ್ಳಬೇಕಿಲ್ಲ. ಆದರೆ ಹರಿಪ್ರಸಾದ್ ನೀಡಿದ ಒ೦ದೇ ಒ೦ದು ವಾಕ್ಯ ಕೂಡಾ ಗ೦ಭೀರವಾಗಿ ಪರಿಗಣಿಸಲು ಅರ್ಹವಲ್ಲ. ಅವರಿಗೆ ಲೋಕಾಯುಕ್ತ ಹೇಗೆ ಕೆಲಸ ಮಾಡುತ್ತದೆ ಎ೦ಬ ಪ್ರಾಥಮಿಕ ಅರಿವೂ ಇದ್ದ೦ತಿಲ್ಲ. ಅವರು ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಭಾರತ ಸರಕಾರದ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ ಗಳನ್ನು ಓದಿ ಪತ್ರಿಕೆಗಳಿಗೆ ಹೇಳಿಕೆ ನೀಡಬೇಕು. ಅರೆಬರೆ ಗೊತ್ತಿರುವ ಪತ್ರಕರ್ತರು, ಟಿವಿ ವರದಿಗಾರರು ಹೇಳಿದ್ದೆನ್ನೆಲ್ಲಾ ಬರೆಯುತ್ತಾರೆ....
Guest | 04 Aug 2011 08:14 pm | Reply »
Re: I fully agree with you-D.M.Sagar
Guest | 06 Aug 2011 07:05 pm
Re: :-)
Guest | 04 Aug 2011 11:21 pm
ಹರಿಪ್ರಸಾದ್ ಅವರು ಮೂರು ದಶಕಗಳಿಂದಲೂ ರಾಜ್ಯದ ರಾಜಕಾರಣದಲ್ಲಿ ಸಕ್ರಿಯವಾಗಿರುವ ವೈಯಕ್ತಿಕವಾಗಿಯೂ, ರಾಜಕೀಯವಾಗಿಯೂ ಸಾಕಷ್ಟು ನಿಸ್ಪೃಹತೆ ಹಾಗೂ ಪ್ರಾಮಾಣಿಕತೆಗಳನ್ನು ಇಟ್ಟುಕೊಂಡವರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಕುರಿತ ಅವರ ಆರೋಪ ಕೇವಲ ಕುಹಕ ಎಂದು ಯಾರೂ ತಳ್ಳಿ ಹಾಕುವಂತಿಲ್ಲ. ಕೆಂಡಸಂಪಿಗೆಯಲ್ಲಿ ಇಂತಹ ಲೇಖನ ನೋಡಿ ಬೇಸರವಾಯ್ತು...
Guest | 04 Aug 2011 04:22 pm | Reply »
ಮೊನ್ನಿನ ಘಟನೆಗಳ ಕುರಿತು ಕೆಲ ಹಿಂದಿ ನ್ಯೂಸ್ ಚಾನೆಲ್ ಗಳನ್ನ ನಾನು ವೀಕ್ಷಿಸುತ್ತಿದ್ದೆ. ಕರ್ನಾಟಕದ “ಆ” ಸುದ್ದಿಗಳನ್ನವರು - “ಕರ್ನಾಟಕ್ ಕೀ ನಾಟಕ್” ಎಂದು ಹೈಲೈಟ್ ಮಾಡುತ್ತಿದ್ದರು. ಈ ನಾಟಕೀಯ ಬೆಳವಣಿಗೆಗಳನ್ನೆಲ್ಲ (ಮಾರಿಷಸ್ ಟು ಸ್ಟಾರ್ ಹೋಟೆಲೊಳಗಿನ ಗುಪ್ತ ಮತದಾನದ ತನಕ) ನೋಡಿದರೆ ಸಿದ್ಧಾರ್ಥರ ವ್ಯಾಖ್ಯಾನವನ್ನು ತಳ್ಳಿಹಾಕುವಂತಿಲ್ಲ....
Guest | 04 Aug 2011 03:56 pm | Reply »
idu just siddharthana anasike ashte, vyakhyaana anta dodda pada beda idakke.....
Guest | 04 Aug 2011 03:50 pm | Reply »
ಹೆಗಡೆಯವರು ಹಿಂದೊಮ್ಮೆ ಅಡ್ವಾನಿಯವರ ಮಾತಿಗೆ ಬೆಲೆ ಕೊಟ್ಟು ರಾಜಿನಾಮೆ ಹಿಂತೆಗೆದುಕೊಂಡರು ಎಂಬ ಒಂದೇ ಆಧಾರದ ಮೇಲೆ ಬರೆದಂತಿದೆ ಈ ಲೇಖನ. ಹರಿಪ್ರಸಾದರಿಗಿರುವ ರಾಜಕೀಯ ಅಗತ್ಯಗಳು ಹೆಗಡೆಯವರಿಗೆ ಇದ್ದಂತಿಲ್ಲ. ಸುಮ್ಮನೆ ಹುಳುಕು ಹುಡುಕಬೇಡಿ. ಅಡ್ವಾಣಿಗಿರುವ ಸಮಸ್ಯೆ ಭ್ರಷ್ಟ ಯಡಿಯೂರಪ್ಪನವರನ್ನು ಇಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ಹೇಗೆ ಬಡಿದಾದುವುದು ಎಂಬುದು....
Guest | 04 Aug 2011 03:27 pm | Reply »
Re: ಭಾವನಾತ್ಮಕ ವಿಷಯಗಳೆಂದರೆ ಇವರಿಗೇನೋ ಮಮತೆ. ರಾಮನ ಕತೆ ಯಾರಿಗೂ ಬೇಡದಷ್ಟು ಹಳತಾಯ್ತು. ಈಗಿನ ಬಿಸಿ ವಿಷಯ ಕೃಷ್ಣ ಧನ (ಕಪ್ಪು ಹಣ)ದ್ದು. ಅತ್ತೂ ಕರೆದು ಯಡಿಯೂರಪ್ಪರಿಂದ ರಾಜಿನಾಮೆ ಕೊಡಿಸಿದರೂ ಪಕ್ಷದ ಕಳಂಕ ಹೋಗಲಾರದು. ಇವೆಲ್ಲ ಜನರ ಕಣ್ಣೊರೆಸುವ ತಂತ್ರಗಳಷ್ಟೆ
Guest | 09 Aug 2011 10:25 am

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ