ಸೋಮವಾರ, ಆಗಸ್ಟ್ 29, 2011

Amerikadalli moda Indiadalli maleyadaddu


ಅಣ್ಣಾ ಮತ್ತು ಷೇರು ಸರ್ಕಸ್:ಸಿದ್ಧಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಶನಿವಾರ, 27 ಆಗಸ್ಟ್ 2011 (05:28 IST)
ಅಣ್ಣಾ ಹಜಾರೆ

ಜನಲೋಕಪಾಲ ಮಸೂದೆ ಅಂಗೀಕಾರ ಒತ್ತ್ತಾಯಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ದೆಹಲಿಯ ತಿಹಾರ್ ಜೈಲಿನಿಂದ ರಾಮಲೀಲಾ ಮೈದಾನಕ್ಕೆ ಶಿಫ್ಟ್ ಆಗುತ್ತಿರುವಂತೆಯೇ ರಾಷ್ಟ್ರದ ಶೇರು ಮಾರುಕಟ್ಟೆಯಲ್ಲಿ ಕಂಡರಿಯದ ವಿದ್ಯಮಾನಗಳು ನಡೆಯ ಹತ್ತಿವೆ. ಭಾರತದ ಆರ್ಥಿಕ ರಾಜಧಾನಿ ಎಂದೇ ಹೆಸರಾದ ಮುಂಬೈ ಶೇರುಪೇಟೆ ಒಂದೇ ವಾರದ ಅವಧಿಯಲ್ಲಿ ೬೯೮ ಅಂಕಗಳನ್ನು ಕಳೆದುಕೊಂಡು ಕಳೆದ ೧೫ ತಿಂಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಟ್ಟ ತಲುಪಿತು. ಮಧ್ಯಮ ಶ್ರೇಣಿಯ ಸೂಚ್ಯಂಕ ೩೮೬ ಅಂಕಗಳಷ್ಟು ಹಾನಿಗೆ ಒಳಗಾದರೆ, ಕೆಳ ಮಟ್ಟದ ಶ್ರೇಣಿ ಸೂಚ್ಯಂಕ ೬೧೬ ಅಂಕಗಳ ಕುಸಿತ ಕಂಡಿತು. ರಾಷ್ಟ್ರದ ಪ್ರಮುಖ ಉದ್ಯಮಗಳ ಪೈಕಿ ಪ್ರಮುಖವಾಗಿ ಟಾಟ ಸಮೂಹದ ಉದ್ದಿಮೆಗಳು, ರಿಲೆಯನ್ಸ್, ಜಿಂದಾಲ್, ಇನ್ಫೋಸಿಸ್, ಹಿಂಡಾಲ್ಕೊ, ಐಸಿಐಸಿಐ ಬ್ಯಾಂಕ್, ಸಿಸ್ಕೋ ಹೀಗೆ ಹಲವಾರು ಕಂಪನಿಗಳ ಮಾರುಕಟ್ಟೆಯಲ್ಲಾದ ಒತ್ತಡದ ಕಾರಣ ಹಲವು ಲಕ್ಷ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದವು.

ಷೇರುಗಳ ಬೆಲೆ ಸರ್ಕಸ್ಸಿನಲ್ಲಿ ಅವುಗಳ ಮೇಲೆ ವಿಶ್ವಾಸ ಕಳೆದುಕೊಂಡ ಹೂಡಿಕೆದಾರರು ಆಪದ್ದನವೆಂದು ಚಿನ್ನವನ್ನು ಬಾಚಿಕೊಳ್ಳುವ panic buyingಗೆ ಕೈಹಾಕಿದ್ದರಿಂದ ಚಿನ್ನದ ಧಾರಣೆ ಹೊಸ ದಾಖಲೆಯನ್ನೇ ಬರೆಯಿತು. ಒಂದೇ ದಿನ ಚಿನ್ನದ ಬೆಲೆ ಪ್ರತಿ ೧೦ ಗ್ರಾಂಗೆ ೧೭೧೩ ಏರಿಕೆಯಾಗಿ, ಆಗಸ್ಟ್ ೨೦ ರಂದು ದಾಖಲೆಯ ೨೮,೧೦೫ ಕಂಡಿತು.
ದೇಶದಲ್ಲಿ ಅತಿ ದೊಡ್ಡ ಚಿನ್ನದ ಸಂಗ್ರಹ ಹೊಂದಿರುವ ಭಾರತ ಸರ್ಕಾರಕ್ಕೆ ಒಂದೇ ದಿನ ೨೨ ಸಾವಿರ ಕೋಟಿ ರೂಪಾಯಿ ಲಾಭ ಲಬಿಸಿತು. ಬೆಳ್ಳಿ ಕೂಡ ಸಾಕಷ್ಟು ಏರಿಕೆ ಕಂಡು, ೧೦ ದಿನಗಳ ಅವಧಿಯಲ್ಲಿ ಶೇ ೨೪ ರಷ್ಟು ಹೆಚ್ಚಾಗಿ ೭೦ಸಾವಿರದ ಆಸುಪಾಸಿನಲ್ಲಿ ಹೊಯ್ದಾಡುತ್ತಿದೆ.

ಇದು ಅಣ್ಣಾ ಹಜಾರೆ ಅವರ ಚಳುವಳಿ ಉಂಟು ಮಾಡಿರುವ ಪ್ರತಿಕೂಲ ಪರಿಣಾಮ ಎಂದು ಯಾರೂ ಭಾವಿಸಬಾರದು. ವಿಶ್ವ ಮಟ್ಟದಲ್ಲಿ ಅಮೆರಿಕಾ ಆರ್ಥಿಕ ನಿರ್ವಹಣೆಯ ವಿಫಲಚಿತ್ರ ಜಗಜ್ಜಾಹಿರಾಗುತ್ತಿದ್ದಂತೆಯೇ, ಯುರೋಪ್ ಎಂದೂ ಕಾಣದ ಸಾಲದ ಹೊರೆಯಲ್ಲಿ ನಲುಗುತ್ತಿರುವಂತೆಯೇ ವಿಶ್ವದೆಲ್ಲೆಡೆ ಆರ್ಥಿಕ ಹಿಂಜರಿತದ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ. ಭಾರತವೇನೂ ಹೊರತಾಗಲು ಸಾಧ್ಯವಿಲ್ಲವಲ್ಲ?

ಜಾಗತಿಕ ಮಾರುಕಟ್ಟೆಯಲ್ಲಿ ಮೇಲುಗೈ ಹೊಂದಿದ್ದ ಅಮೆರಿಕಾ ತನ್ನದೇ ಆದ ಎಡವಟ್ಟುಗಳ ಪರಿಣಾಮವಾಗಿ ವಿಶ್ವಾಸಾರ್ಹತೆ ಕಳೆದುಕೊಂಡು ನಗ್ನವಾಗಿ ನಿಂತಿದೆ. ತನ್ನ ಆಂತರಿಕ ಬೇಡಿಕೆಗಳನ್ನು ಪೂರೈಸಿಕೊಳ್ಳಲಾಗದೆ, ಅಂತರರಾಷ್ಟ್ರೀಯ ಸಾಲದ ಮಿತಿಯನ್ನು ವಿಸ್ತರಿಸಿಕೊಳ್ಳುತ್ತಾ ನಡೆದಿರುವ ಅಮೆರಿಕಾದಲ್ಲಿ ಪ್ರಥಮ ಬಾರಿಗೆ ಆಂತರಿಕ ಉತ್ಪನ್ನ ದರದಲ್ಲಿ (GDP) ಶೇ ೧ ರಷ್ಟು ಕೆಳಗಿಳಿದಿದೆ. ಅಲ್ಲೂ ಜನತೆ ಚಿನ್ನಕ್ಕೆ ಮುಗಿಬೀಳುವ ಮೂಲಕ ಸರ್ಕಾರದ ವಿಶ್ವಾಸಾರ್ಹತೆಗಳನ್ನು ಶಂಕಿಸುತ್ತಿದ್ದಾರೆ.

ಚಿನ್ನದ ಬೆಲೆ ನ್ಯೂಯಾರ್ಕ್ ಪೇಟೆಯಲ್ಲಿ ಒಂದೇ ದಿನ ಒನ್ಸ್ ಒಂದಕ್ಕೆ ೧೮೯೦ ಡಾಲರ್ ಏರಿಕೆ ಕಂಡಿದೆ. ೧೯೨೦ ರಿಂದ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಚಿನ್ನಕ್ಕೆ ಸುವರ್ಣಕಾಲ ಲಭಿಸಿದೆ. ಅಮೆರಿಕಾದಲ್ಲಿ ಆದಾಯ ಇಳಿಮುಖವಾಗುತ್ತಿದ್ದಂತೆ unproductiveವೆಚ್ಚಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ಸೂರೆನ್ಸ್, ಆಹಾರ, ಆರೋಗ್ಯ ಹಾಗೂ ರಕ್ಷಣಾ ಉತ್ಪಾದನೆಯ ವಲಯಗಳಲ್ಲಿ ಸರ್ಕಾರ ಅಪಾರ ಪ್ರಮಾಣದ ಸಬ್ಸಿಡಿಯನ್ನು ನೀಡಬೇಕಾಗಿರುವುದರಿಂದ ವೆಚ್ಚದಲ್ಲಿ ಸರಿದೂಗಿಸಲು ಹಲವು ಕಸರತ್ತುಗಳನ್ನು ನಡೆಸಬೇಕಾಗಿದೆ. ಅಮೆರಿಕಾದ ಸಾಲ ಮಾರುಕಟ್ಟೆಯಲ್ಲಿ (debt) ನಲ್ಲಿ ಶೇ ೨೬ ರಷ್ಟು ಪಾಲು ನೀಡಿರುವ ಚೀನಾ ಅಮೆರಿಕಾದ ಈ ವಿದ್ಯಮಾನಗಳಿಂದ ಆತಂಕಗೊಂಡು ತನ್ನ ಬಂಡವಾಳ ವಾಪಸಾತಿಗೆ ಒತ್ತಾಯ ಹಾಕಲಾರಂಭಿಸುತ್ತಿದೆ. ಅಮೆರಿಕಾ ಉಪಾಧ್ಯಕ್ಷ ಜಿಮ್ ಬಿಡೆನ್ ಅವರು ಬೈಜಿಂಗ್‌ಗೆ ವಿಶೇಷ ಭೇಟಿ ನೀಡಿ, ನಿಮ್ಮ ಬಂಡವಾಳ ನಮ್ಮಲ್ಲಿ ಸುರಕ್ಷಿತವಾಗಿರಲಿದೆ, ಸರ್ಕಾರವೇ ನಿಮ್ಮ ಸಾಲಕ್ಕೆ ಜಾಮೀನಾಗಿ ನಿಲ್ಲಲಿದೆ. ಎಂದು ಮನವೊಲಿಸಿದ ನಂತರವೇ ಅಲ್ಲಿದ್ದ ಆತಂಕ ತಹಬಂದಿಗೆ ಬಂದು ಮಾರುಕಟ್ಟೆ ಕ್ರಾಸ್ ಆಗುವುದು ತಪ್ಪದೆ.

ಅಮೆರಿಕಾದ ವಿದ್ಯಮಾನಗಳು ಯುರೋಫ್, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಎಲ್ಲಾ ಪ್ರಮುಖ ರಾಷ್ಟ್ರಗಳಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಿದೆ. ಇದೇ ತಾನೇ ಸುನಾಮಿ, ಭೂಕಂಪಗಳ ಹೊಡೆತದಿಂದ ತತ್ತರಿಸಿದ ಜಪಾನ್‌ಗೆ ಸುಧಾರಿಸಿಕೊಳ್ಳಲು ಶಕ್ತಿ ಇಲ್ಲದಂತಾಗಿದೆ. ಭಾರತದಲ್ಲೂ ಅಮೆರಿಕಾದ ಆರ್ಥಿಕ ಕುಸಿತ ನೈತ್ಯಾತ್ಮಿಕ ಪ್ರಭಾವ ಬೀರುತ್ತಿರುವ ಸೂಚನೆಗಳನ್ನು ಲೇಖನದ ಆರಂಭದಲ್ಲಿಯೇ ಪ್ರಸ್ತಾಪಿಸಿದ್ದೇನೆ.

ಒಂದು ರಾಷ್ಟ್ರದ ಆರ್ಥಿಕ ಸದೃಢತೆಯ ಚಿತ್ರಣವನ್ನು ಕಟ್ಟಿಕೊಡಬಲ್ಲ Gross Demostic Product- GDP ೨೦೧೦-೧೧ ರಲ್ಲಿ ೯.೩% ಇದ್ದದ್ದು ಇದೀಗ ೭.೮% ಕ್ಕೆ ಇಳಿದಿದೆ.

ಬಂಡವಾಳದ ಹೂಡಿಕೆಯ ಪ್ರಮಾಣ ದಾಖಲೆಯ ಕುಸಿತ ಕಂಡಿದೆ. ೨೦೧೦-೧೧ ರಲ್ಲಿ ೧೭.೪% ರಷ್ಟಿದ್ದ ಹಣ ಹೂಡಿಕೆಯ ಪ್ರಮಾಣ ೨೦೧೧-೧೨ ರಲ್ಲಿ ಶೇ ೮ ರ ಬಳಿ ನಿಲ್ಲಲಿದೆ.

ಕೈಗಾರಿಕಾ ಉತ್ಪನ್ನಗಳ ಬೆಳವಣಿಗೆಯ ಗುರಿ ಇಳಿದಿಕ್ಕಿನಲ್ಲಿಯೇ ಸಾಗುತ್ತಿದೆ. ಏಪ್ರಿಲ್ ೨೦೧೦ ರಲ್ಲಿ ೧೩.೧% ರಷ್ಟಿದ್ದ ಬೆಳವಣಿಗೆಯ ದರ ಏಪ್ರಿಲ್ ೨೦೧೧ ರಲ್ಲಿ ೬.೩%ಕ್ಕೆ ಇಳಿದಿದೆ.

ಏರುತ್ತಿರುವ ಬಡ್ಡಿ ದರಗಳು ಕೈಗಾರಿಕಾ ವಲಯದ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಯಂತ್ರೋದ್ಯಮಗಳ ಬಂಡವಾಳ ಹೂಡಿಕೆ, ಉಕ್ಕು ಆಮದಿನಲಿ ಕಡಿತ, ಸಿಮೆಂಟ್ ಹಾಗೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕುಸಿತ, ರಿಯಲ್ ಎಸ್ಟೇಟ್ ಜಗತ್ತಿನಲ್ಲಿ ಕೊಳ್ಳುವವರೇ ಮುಂದೆ ಬರದೆ ಮಾರಾಟವಾಗದೆ ಉಳಿದ ಆಸ್ತಿಗಳ ಮೊತ್ತದಲ್ಲಿ ಹೆಚ್ಚಳ-ಇವೆಲ್ಲವೂ ಕಾರ್ಪೋರೇಟ್ ಜಗತ್ತನ್ನು ದಿಕ್ಕುಗೆಡಿಸುತ್ತಿವೆ.

೨೦೧೧ ಮಾರ್ಚ್ ವೇಳೆಗೆ ೨,೭೪,೩೬೬ ಕೋಟಿ ರೂಪಾಯಿ ಬಂಡವಾಳ ಹೂಡಲಾದ ೨೮೯ ಯೋಜನೆಗಳು ಪೂರ್ಣಗೊಂಡರೂ ಕೊಳ್ಳುವವರಿಗಾಗಿ ಕಾಯುತ್ತಲಿದೆ. ಅದೇ ರೀತಿ ೨,೫೨,೯೧೨ ಕೋಟಿ ಬಂಡವಾಳ ಹೂಡಿಕೆಯ ೯೮೯ ಯೋಜನೆಗಳು ಇನ್ನೂ ನೆಲಹಂತದಲ್ಲಿಯೇ ಉಳಿದಿವೆ.

ಆರ್ಥಿಕತೆಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಬಂಡವಾಳ ಹೂಡಿಕೆಯ ಗತಿ ಕೂಡ ತನ್ನ momentum ಕಳೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಇದೇ ನಿರುತ್ಸಾಹ ಜನಕ ವಾತಾವರಣ ಮುಂದುವರೆಯುವ ಅಪಾಯಗಳು ಕಾಣಬರುತ್ತಿವೆ.

ಆದ್ಯತಾ ವಲಯಗಳಲ್ಲೂ (core sector) ಇದೇ ನಿರಾಶಾದಾಯಕ ಪರಿಸ್ಥಿತಿ ಕಾಣುತ್ತಿದೆ. ೨೦೦೯-೧೦ ರಲ್ಲಿ ೬.೬೪ ರಷ್ಟಿದ್ದ ಹೂಡಿಕೆಯ ಪ್ರಮಾಣ ಈ ವರ್ಷ೫.೭೨ ಕ್ಕೆ ಕುಸಿದಿದೆ. ಕಲ್ಲಿದ್ದಲು, ಕಚ್ಚಾಎಣ್ಣೆ, ರಸಾಯನಿಕಗಳು, ಉಕ್ಕು, ಸಿಮೆಂಟ್, ವಿದ್ಯುಚ್ಚಕ್ತಿ ಇತ್ಯಾದಿ ಆದ್ಯತಾವಲಯದ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ತೀರಾ ಕಡಿಮೆಯಾಗಿದೆ.

ಹಣದುಬ್ಬರ ( inflation) ಕೂಡ ದೊಡ್ಡ ತಲೆನೋವಾಗಿಯೇ ಮುಂದುವರಿಯಲಿದೆ. ಭಾರತೀಯ ರಿಸರ್ವ ಬ್ಯಾಂಕ್ ಎಷ್ಟೇ ಬಿಗಿಧೋರಣೆ ಅನುಸರಿಸುತ್ತಿದ್ದರೂ, ಹಣದುಬ್ಬರದ ದರ ಶೇ ೧೦ರ ಆಸುಪಾಸಿನಲ್ಲಿಯೇ ಒಲಾಡುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಹಾರ ದಾನ್ಯಗಳ, ಕಚ್ಚಾತೈಲ ಹಾಗೂ ಕಲ್ಲಿದ್ದಲು ಬೆಲೆ ಹೆಚ್ಚಾಗಿ, ಆಮದಿಗೆ ಹೆಚ್ಚು ಹಣ ತೆರಬೇಕಾಗಿರುವುದರಿಂದ ಹಣದುಬ್ಬರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಜೊತೆಗೆ ಕೇಂದ್ರ ಸರ್ಕಾರ ಬತ್ತ, ಮುಸುಕಿನ ಜೋಳ, ಸೋಯಾಬಿನ್‌ಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಬರುವ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಜಾಸ್ತಿಯಾಗುತ್ತದೆಯೇ ಹೊರತಾಗಿ ಕಡಿಮೆಯಾಗುವ ಸಾದ್ಯತೆ ಕಾಣುತ್ತಿಲ್ಲ.

ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸುವಲ್ಲಿ ರಾಷ್ಟ್ರ ವಿಫಲವಾಗುತ್ತಿದೆ ಎಂಬುದು ಆತಂಕಕಾರಿ ಸಂಗತಿ. ೨೦೧೦-೧೧ ರಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ ೧೭ ರಷ್ಟು ಕುಸಿತ ಕಂಡಿದೆ. ೨೦೦೯-೧೦ರಲ್ಲಿ ೩೭.೭ ಬಿಲಿಯನ್ ಡಾಲರ್‌ಗಳಷ್ಟಿದ್ದ ವಿದೇಶಿ ಬಂಡವಾಳ ಹರಿದು ಬಂದರೆ, ಈ ಬಾರಿ ೨೭ ಬಿಲಿಯನ್ ಡಾಲರ್ ಗಳಷ್ಟು ಮಾತ್ರ ಬರುವ ನಿರೀಕ್ಷೆಯಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಳಿತಗಳ ನಡುವೆಯೂ ಅಭಾದಿತವಾಗಿ ಹೆಚ್ಚಾಗುತ್ತಿರುವ ನಮ್ಮ ತೈಲ ಬೇಡಿಕೆಯಿಂದಾಗಿ ನಮ್ಮ ಆಮದು ರಫ್ತಿನ ಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ.

ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡುದಾರಕ್ಕೆ ಎನ್ನುವಂತೆ ರಫ್ತು ಪ್ರಮಾಣದಲ್ಲಿ ಈ ವರ್ಷ ದಾಖಲಾದ ಶೇ ೩೪ರ ಏರಿಕೆ ಹೆಚ್ಚುತ್ತಿರುವ ಆಮದು ಬಿಲ್‌ಗಳ ಮುಂದೆ ಸರಿ ಸಾಟಿಯಾಗಿ ನಿಲ್ಲಲಾಗುತ್ತಿಲ್ಲ. ಇಂಜನಿಯರಿಂಗ್ ಗೂಡ್ಸ್, ರೆಡಿಮೇಡ್ ಗಾರ್ಮೆಂಟ್ಸ್, ಜೆಮ್ಸ್, ಚಿನ್ನಾಭರಣಗಳು ಹಾಗೂ ಔಷಧಿಗಳ ರಪ್ತಿನಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. ಅಕ್ಟೋಬರ್ ೨೦೧೦ ರಲ್ಲಿ ಶೇ೨೬.೮ ರಷ್ಟಿದ್ದ ರಪ್ತು ಪ್ರಮಾಣ ಮಾರ್ಚ್೨೦೧೧ ರ ವೇಳೆಗೆ ೪೪.೩ ರಷ್ಟು ಏರಿಕೆ ಕಂಡಿದೆ. ಏಪ್ರಿಲ್ ೨೦೧೧ ರಲ್ಲಿ ನಮ್ಮ ಒಟ್ಟು ರಫ್ತಿನ ಪ್ರಮಾಣ ೨೩.೮ ಬಿಲಿಯನ್ ಡಾಲರ್ ಗಳಷ್ಟಿದ್ದರೆ, ಅದೇ ಅವಧಿಯಲ್ಲಿ ನಮ್ಮ ಆಮದಿನ ಪ್ರಮಾಣ ೩೨.೮ ಬಿಲಿಯನ್ ಡಾಲರ್ ಗಳಿಗೇರಿದೆ. ತೈಲ ಉತ್ಪಾದಕ ರಾಷ್ಟ್ರಗಳ ತೈಲ ಬೆಲೆಯನ್ನು ಇಳಿಸುವ ಯಾವ ಲಕ್ಷಣಗಳೂ ಕಾಣುತ್ತಿಲ್ಲವಾದ್ದರಿಂದ ಮುಂದಿನ ದಿನಗಳು ಇನ್ನೂ ದುಬಾರಿಯಾಗುವ ಕೆಟ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಕಡಿಮೆ ರಫ್ತು ಹಾಗೂ ಹೆಚ್ಚಿದ ಆಮದು ಎರಡರ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗದೆ, ಅಮೂಲ್ಯ ವಿದೇಶಿ ವಿನಿಮಯ ನಿಧಿಗೆ ಕೈಹಾಕಬೇಕಾಗಿದೆ. ನಮ್ಮ ವಿದೇಶಿ ವಿನಿಮಯ ನಿಧಿ ದಿನೇ ದಿನೇ ಕರಗುತ್ತಲಿದೆ. ಆಗಸ್ಟ್ ೧೨ ರಂದು ಒಂದೇ ದಿನ ೬೨೧ ಮಿಲಿಯನ್ ಡಾಲರ್‌ಗಳಷ್ಟು ನಿಧಿ ಕರಗಿ ಹೋಯಿತು. ಇದೇ ರೀತಿಯಲ್ಲಿ ಫಾರಿನ್ ಎಕ್ಸ್‌ಚೇಂಚ್ ಮೇಲಿನ ಅವಲಂಬನೆ ಮುಂದುವರಿದಿದ್ದೇ ಆದರೆ ೩೧೬.೬೦ ಬಿಲಿಯನ್ ಡಾಲರ್‌ಗಳಷ್ಟೇರುವ ವಿದೇಶಿ ವಿನಿಮಯದ ನಿಧಿ ವರ್ಷ ಒಪ್ಪತ್ತಿನಲ್ಲಿ ಖಾಲಿಯಾಗುವ ಅಪಾಯಗಳು ಕಾಡುತ್ತಿವೆ.

ಇನ್ನು ಅನುತ್ಪಾದಕ ವೆಚ್ಚಗಳು (unproductive expenditure) ವರ್ಷೆ ವರ್ಷೆ ಏರಿಕೆಯಾಗುತ್ತಾ ನಡೆದಿದೆ. ಸರ್ಕಾರದ ಅನುತ್ಪಾದಕ ವೆಚ್ಚ ಏಪ್ರಿಲ್ ೨೦೧೦ ರಲ್ಲಿ ೬೭, ೨೨೬ ಕೋಟಿ ರೂಪಾಯಿಗಳಷ್ಟಿದ್ದು ಏಪ್ರಿಲ್ ೨೦೧೧ ರಲ್ಲಿ ೮೭.೯೩೦ಕ್ಕೇರಿದೆ. ಅದೇ ರೀತಿ ಏಪ್ರಿಲ್ ೨೦೧೦ ರಲ್ಲಿ ೪೮,೨೦೬ ಕೋಟಿ ರೂಪಾಯಿಗಳಷ್ಟಿದ್ದ ಯೋಜನೇತರ ವೆಚ್ಚ (non-plan expenditure) ಏಪ್ರಿಲ್ ೨೦೧೧ರ ವೇಳೆಗೆ ೭೦,೧೨೩ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ರಾಷ್ಟ್ರೀಯ ಉದ್ಯೋಗ ಯೋಜನೆ(ನ.ರೇ.ಗಾ), ಆಹಾರ, ಪೆಟ್ರೋಲಿಯಂ ಹಾಗೂ ರಾಸಾಯನಿಕ ಗೊಬ್ಬರಗಳ ಮೇಲೆ ನೀಡುತ್ತಿರುವ ಸಬ್ಸಿಡಿಯ ಕಾರಣದಿಂದಾಗಿ ಅನುತ್ಪಾದಕ ವೆಚ್ಚ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಗಿದೆ. ಈಗ ಅಣ್ಣಾ ಹಜಾರೆಯವರ ಚಳುವಳಿಯಿಂದ ಉಂಟಾಗುತ್ತಿರುವ ಮಾನ ಹಾನಿಯನ್ನು ಸರಿದೂಗಿಸಿಕೊಳ್ಳಲು, ಕುಸಿಯುತ್ತಿರುವ ತನ್ನ ವರ್ಚಸ್ಸನ್ನು ಮೇಲೆತ್ತಲು ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಕಾಯ್ದೆ( Food Security Act)ಯನ್ನು ಜಾರಿಗೆ ತಂದ್ದದೇ ಆದರೆ, ಆಹಾರ ವಲಯದಲ್ಲಿಯೇ ಕೇಂದ್ರ ಸರ್ಕಾರದ ಸಬ್ಸಿಡಿ ಪ್ರಮಾಣ ೧ ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಲಿದೆ.

ಗಾಯದ ಮೇಲೆ ಬರೆ ಎನ್ನುವಂತೆ ರಿಸರ್ವಬ್ಯಾಂಕ್ ಮತ್ತೊಮ್ಮೆ ಬಡ್ಡಿ ದರಗಳನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿದೆ-ಹಣದುಬ್ಬರವನ್ನು ನಿಯಂತ್ರಿಸುವ ದೂರದ ಆಸೆಯಿಂದಾಗಿ ಬಡ್ಡಿದರಗಳು ಶೇ ೦.೨೫ ರಷ್ಟು ಏರಿಕೆಯಾಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಬಡ್ಡಿ ದರ ಏರಿಕೆಯ ನಂತರವೂ ಇದೇ ಈ ನಿರಾಶಾದಾಯಕ ಪರಿಸ್ಥಿತಿ ಮುಂದುವರಿದರೆ, ಮುಂಬರುವ ದಿನಗಳು ಇನ್ನೂ ಕಷ್ಟಕರವಾಗಲಿವೆ.

ಬೆಲೆ ಏರಿಕೆಯ ಬಿಸಿಯಿಂದ ಭಾರತೀಯ ಶ್ರೀ ಸಾಮಾನ್ಯ ತತ್ತರಿಸುತ್ತಿದ್ದಾನೆ. ತೈಲ ಬೆಲೆಯಲ್ಲಿ ವರ್ಷದಿಂದೀಚೆಗೆ ದಾಖಲೆಯ ಪ್ರಮಾಣದ ಏರಿಕೆಯಾಗಿದೆ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ತೆರಿಗೆ ಭರಿಸುತ್ತಿರುವ ದಾಖಲೆ ಭಾರತೀಯರದೇ ಆಗಿ ಉಳಿದಿದೆ. ಬಡವ- ಶ್ರೀಮಂತರ ನಡುವಣ ಅಂತರ ಮತ್ತೆ ಹಿರಿದಾಗುತ್ತಾ ಹೋಗುತ್ತಿದೆ. ತುತ್ತು ಅನ್ನಕ್ಕೆ ಗತಿಯಿಲ್ಲದ ಬಡ ಜನರ ಪ್ರಮಾಣ ಹೆಚ್ಚಾಗುತ್ತಿರುವಂತೆ ಅವರ ಕೊಳ್ಳುವ ಶಕ್ತಿ( purchasing Power) ಕುಂಠಿತಗೊಳ್ಳುತ್ತಿರುವಂತೆಯೇ ಅತ್ಯಾಧುನಿಕ ಐಷಾರಾಮಿ ಕಾರ್‌ಗಳು, ವಿಮಾನಗಳು, ಹೆಲಿಕ್ಯಾಪ್ಟರ್‌ಗಳಿಗೆ ಭಾರತವೇ ನೆಚ್ಚಿನ ಗ್ರಾಹಕರಾಗುತ್ತಾ ಬಂದಿದೆ.

ಇಷ್ಟಾಗಿಯೂ ಆಳುವ ಪ್ರಭುಗಳು ತಮ್ಮ ಆಶಾವಾದ ಕೈಬಿಟ್ಟಿಲ್ಲ. ೨೦೦೭-೧೨ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಶೇ ೮ರ ಬೆಳವಣಿಗೆಯ ಗುರಿಯನ್ನು ಸಾಧಿಸಿದ್ದು ಈ ವರ್ಷ ಅದು ೯ ಗಡಿಯನ್ನು ದಾಟುವ ಮಾತನ್ನಾಡಿದ್ದಾರೆ ನಮ್ಮ ಪ್ರಧಾನಿ, ೨೦೨೫ರ ವೇಳೆಗೆ ಭಾರತ ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಜಿಡಿಪಿ ಹೊಂದಿರುವ ರಾಷ್ಟ್ರವಾಗಲಿದೆ ಎಂಬ ಸುಂದರ ಕನಸನ್ನು ನಮ್ಮ ಮುಂದೆ ಹೆಣೆದು ತಂದಿಡಲು ಪ್ರಧಾನಿ ಮತ್ತವರ ತಂಡ ಶಕ್ತಿಮೀರಿ ಪ್ರಯತ್ನಿಸುತ್ತಲಿದೆ. ಆರ್ಥಿಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ, ಭಾರತವನ್ನು ಜಾಗತಿಕ ರಾಷ್ಟ್ರಗಳ ಸಾಲಿನಲ್ಲಿ ಅತಿಗಣ್ಯ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ ವಿಶ್ವ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ: ಮನಮೋಹನ್ ಸಿಂಗ್ ಈಗಿನ ಸವಾಲುಗಳನ್ನು ಮೆಟ್ಟಿ ನಿಂತು, ಈ ಪವಾಡವನ್ನು ನಡೆಸಲು ಅವಕಾಶ ಸಿಗುತ್ತದೆಯೇ ಎಂಬುದೇ ಈ ಬೃಹತ್ ರಾಷ್ಟ್ರದ ಮುಂದಿರುವ ಪ್ರಶ್ನೆಯಾಗಿದೆ.

ಪುಟದ ಮೊದಲಿಗೆ
Votes: 0 Rating: 0
ಸಿದ್ಧಾರ್ಥ ಅವರಿಗೆ ಎಲ್ಲವುದನ್ನು sensationalize ಮಾಡುವುದು ಚಾಳಿಯೆಂದು ತೋರುತ್ತದೆ.. ಈ ಲೇಖನದ ಶೀರ್ಷಿಕೆಗೂ ಅದರಲ್ಲಿನ ವಸ್ತುವಿಶಯಕ್ಕು ಯಾವುದೇ ರೀತಿಯ ಸಂಬಂಧವಿಲ್ಲ.. ಈಗ ಚಾಲ್ತಿಯಲ್ಲಿರುವ hot topic ಶೀರ್ಷಿಕೆ ಹಾಕಿ ಇಂಟರ್ನೆಟ್-ಇಂದ ಒಂದಷ್ಟು ದತ್ತಾಂಶಗಳನ್ನು (ಡಾಟಾ) ತಂದು ಹಾಕಿ ಕಲಸುಮೇಲೋಗರ ಮಾಡಿಟ್ಟಿದ್ದಾರೆ ಅಷ್ಟೇ.. "ಹಲವಾರು ಕಂಪನಿಗಳ ಮಾರುಕಟ್ಟೆಯಲ್ಲಾದ ಒತ್ತಡದ ಕಾರಣ ಹಲವು ಲಕ್ಷ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದವು." --- ನಷ್ಟ ಅನುಭವಿಸಿದ್ದು ಕಂಪನಿ-ಗಳಲ್ಲ... ಅವುಗಳ ಮಾರುಕಟ್ಟೆ ಮೌಲ್ಯ (ಮಾರ್ಕೆಟ್ ಕ್ಯಾಪಿಟಲೈಜೆಶನ್) ಅಷ್ಟೇ ಕುಸಿದದ್ದು.. ಅದರಿಂದ ಕಂಪನಿ-ಗಳಿಗೆ ಯಾವುದೇ ರೀತಿಯ ಅಕೌಂಟಿಂಗ್ ನಷ್ಟ ಆಗಿಲ್ಲ.. "ಇದು ಅಣ್ಣಾ ಹಜಾರೆ ಅವರ ಚಳುವಳಿ ಉಂಟು ಮಾಡಿರುವ ಪ್ರತಿಕೂಲ ಪರಿಣಾಮ ಎಂದು ಯಾರೂ ಭಾವಿಸಬಾರದು. " -- ಎಲ್ಲರನ್ನು ನಿಮ್ಮಂತಹ ಮೂರ್ಖರೆನ್ದುಕೊಳ್ಳಬೇಡಿ... ಇಂದಿನ ವಿಶ್ವ-ವಾಣಿಜ್ಯದ ಆಗುಹೋಗುಗಳು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಗೊತ್ತು "ದೇಶದಲ್ಲಿ ಅತಿ ದೊಡ್ಡ ಚಿನ್ನದ ಸಂಗ್ರಹ ಹೊಂದಿರುವ ಭಾರತ ಸರ್ಕಾರಕ್ಕೆ ಒಂದೇ ದಿನ ೨೨ ಸಾವಿರ ಕೋಟಿ ರೂಪಾಯಿ ಲಾಭ ಲಬಿಸಿತು" -- ಇದು ಕೇವಲ "ಪೇಪರ್ ಪ್ರಾಫಿಟ್".. ಲಾಭ ಸಿಗುವುದು ಅದನ್ನು ಮಾರಿದಾಗ ಮಾತ್ರ.. "ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ತೆರಿಗೆ ಭರಿಸುತ್ತಿರುವ ದಾಖಲೆ ಭಾರತೀಯರದೇ ಆಗಿ ಉಳಿದಿದೆ. " -- ಸ್ವಾಮಿ, ಇದನ್ನು ಬರೆಯುವಾಗ ನೀವೇನು ಬರೀತಾ ಇದ್ದೀರಿ ಅಂತ ಗೊತ್ತಾಗ್ತಾ ಇತ್ತ ? ಸುಮ್ನೆ ಬಾಯಿಗೆ ಬಂದಿದು ಬರಿಬೇಡ್ರಿ.. ಭಾರತದ ತೆರಿಗೆ ದಾಖಲಾತಿ ಯಾವುದೇ ರೀತಿಯಲ್ಲೂ ಹೆಚ್ಚಲ್ಲ (neither do we have ದಿ highest tax rates in the world, nor do we have largest number of tax payers in the world). ದಯವಿಟ್ಟು ನಿಮಗೆ ಗೊತ್ತಿಲ್ಲದ ವಿಷಯಗಳ ಮೇಲೆ ಸುಮ್ಮನೆ ಬುರುಡೆ ಬಿಡಲು ಹೋಗಬೇಡಿ..ಈ ರೀತಿ ಸಿಕ್ಕಿದ "ಹಾಟ್ ಟಾಪಿಕ್" ಎತ್ತಿಕೊಂಡು ಈ ರೀತಿ ಕಾಗಕ್ಕ-ಗುಬ್ಬಕ್ಕ ಕಥೆ ಬರೆಯುವುದಕ್ಕಿಂತ ಸುಮ್ಮನೆ ಕೂರುವುದೇ ಲೇಸು.. --ರಮೇಶ ಎನ್.,...
Dear Siddhartha, Looks like you have tried to analyse the current market conditions. I did not see any relevance to the title and the article. Be true to the article, this will draw the right audience otherwise you look very stupid!...
"ವಿಶ್ವ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ: ಮನಮೋಹನ್ ಸಿಂಗ್" is this a joke? who are you trying to fool mr. siddhartha? Dr. Singh is an Oxford graduate but there are thousands of such people. He is not rated among even the second tier economists forget being a top tier economist....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ