ಸೋಮವಾರ, ಆಗಸ್ಟ್ 29, 2011

Amerikadalli moda Indiadalli maleyadaddu

ಅಣ್ಣಾ ಮತ್ತು ಷೇರು ಸರ್ಕಸ್:ಸಿದ್ಧಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಶನಿವಾರ, 27 ಆಗಸ್ಟ್ 2011 (05:28 IST)
ಅಣ್ಣಾ ಹಜಾರೆ

ಜನಲೋಕಪಾಲ ಮಸೂದೆ ಅಂಗೀಕಾರ ಒತ್ತ್ತಾಯಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ದೆಹಲಿಯ ತಿಹಾರ್ ಜೈಲಿನಿಂದ ರಾಮಲೀಲಾ ಮೈದಾನಕ್ಕೆ ಶಿಫ್ಟ್ ಆಗುತ್ತಿರುವಂತೆಯೇ ರಾಷ್ಟ್ರದ ಶೇರು ಮಾರುಕಟ್ಟೆಯಲ್ಲಿ ಕಂಡರಿಯದ ವಿದ್ಯಮಾನಗಳು ನಡೆಯ ಹತ್ತಿವೆ. ಭಾರತದ ಆರ್ಥಿಕ ರಾಜಧಾನಿ ಎಂದೇ ಹೆಸರಾದ ಮುಂಬೈ ಶೇರುಪೇಟೆ ಒಂದೇ ವಾರದ ಅವಧಿಯಲ್ಲಿ ೬೯೮ ಅಂಕಗಳನ್ನು ಕಳೆದುಕೊಂಡು ಕಳೆದ ೧೫ ತಿಂಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಟ್ಟ ತಲುಪಿತು. ಮಧ್ಯಮ ಶ್ರೇಣಿಯ ಸೂಚ್ಯಂಕ ೩೮೬ ಅಂಕಗಳಷ್ಟು ಹಾನಿಗೆ ಒಳಗಾದರೆ, ಕೆಳ ಮಟ್ಟದ ಶ್ರೇಣಿ ಸೂಚ್ಯಂಕ ೬೧೬ ಅಂಕಗಳ ಕುಸಿತ ಕಂಡಿತು. ರಾಷ್ಟ್ರದ ಪ್ರಮುಖ ಉದ್ಯಮಗಳ ಪೈಕಿ ಪ್ರಮುಖವಾಗಿ ಟಾಟ ಸಮೂಹದ ಉದ್ದಿಮೆಗಳು, ರಿಲೆಯನ್ಸ್, ಜಿಂದಾಲ್, ಇನ್ಫೋಸಿಸ್, ಹಿಂಡಾಲ್ಕೊ, ಐಸಿಐಸಿಐ ಬ್ಯಾಂಕ್, ಸಿಸ್ಕೋ ಹೀಗೆ ಹಲವಾರು ಕಂಪನಿಗಳ ಮಾರುಕಟ್ಟೆಯಲ್ಲಾದ ಒತ್ತಡದ ಕಾರಣ ಹಲವು ಲಕ್ಷ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದವು.

ಷೇರುಗಳ ಬೆಲೆ ಸರ್ಕಸ್ಸಿನಲ್ಲಿ ಅವುಗಳ ಮೇಲೆ ವಿಶ್ವಾಸ ಕಳೆದುಕೊಂಡ ಹೂಡಿಕೆದಾರರು ಆಪದ್ದನವೆಂದು ಚಿನ್ನವನ್ನು ಬಾಚಿಕೊಳ್ಳುವ panic buyingಗೆ ಕೈಹಾಕಿದ್ದರಿಂದ ಚಿನ್ನದ ಧಾರಣೆ ಹೊಸ ದಾಖಲೆಯನ್ನೇ ಬರೆಯಿತು. ಒಂದೇ ದಿನ ಚಿನ್ನದ ಬೆಲೆ ಪ್ರತಿ ೧೦ ಗ್ರಾಂಗೆ ೧೭೧೩ ಏರಿಕೆಯಾಗಿ, ಆಗಸ್ಟ್ ೨೦ ರಂದು ದಾಖಲೆಯ ೨೮,೧೦೫ ಕಂಡಿತು.
ದೇಶದಲ್ಲಿ ಅತಿ ದೊಡ್ಡ ಚಿನ್ನದ ಸಂಗ್ರಹ ಹೊಂದಿರುವ ಭಾರತ ಸರ್ಕಾರಕ್ಕೆ ಒಂದೇ ದಿನ ೨೨ ಸಾವಿರ ಕೋಟಿ ರೂಪಾಯಿ ಲಾಭ ಲಬಿಸಿತು. ಬೆಳ್ಳಿ ಕೂಡ ಸಾಕಷ್ಟು ಏರಿಕೆ ಕಂಡು, ೧೦ ದಿನಗಳ ಅವಧಿಯಲ್ಲಿ ಶೇ ೨೪ ರಷ್ಟು ಹೆಚ್ಚಾಗಿ ೭೦ಸಾವಿರದ ಆಸುಪಾಸಿನಲ್ಲಿ ಹೊಯ್ದಾಡುತ್ತಿದೆ.

ಇದು ಅಣ್ಣಾ ಹಜಾರೆ ಅವರ ಚಳುವಳಿ ಉಂಟು ಮಾಡಿರುವ ಪ್ರತಿಕೂಲ ಪರಿಣಾಮ ಎಂದು ಯಾರೂ ಭಾವಿಸಬಾರದು. ವಿಶ್ವ ಮಟ್ಟದಲ್ಲಿ ಅಮೆರಿಕಾ ಆರ್ಥಿಕ ನಿರ್ವಹಣೆಯ ವಿಫಲಚಿತ್ರ ಜಗಜ್ಜಾಹಿರಾಗುತ್ತಿದ್ದಂತೆಯೇ, ಯುರೋಪ್ ಎಂದೂ ಕಾಣದ ಸಾಲದ ಹೊರೆಯಲ್ಲಿ ನಲುಗುತ್ತಿರುವಂತೆಯೇ ವಿಶ್ವದೆಲ್ಲೆಡೆ ಆರ್ಥಿಕ ಹಿಂಜರಿತದ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ. ಭಾರತವೇನೂ ಹೊರತಾಗಲು ಸಾಧ್ಯವಿಲ್ಲವಲ್ಲ?

ಜಾಗತಿಕ ಮಾರುಕಟ್ಟೆಯಲ್ಲಿ ಮೇಲುಗೈ ಹೊಂದಿದ್ದ ಅಮೆರಿಕಾ ತನ್ನದೇ ಆದ ಎಡವಟ್ಟುಗಳ ಪರಿಣಾಮವಾಗಿ ವಿಶ್ವಾಸಾರ್ಹತೆ ಕಳೆದುಕೊಂಡು ನಗ್ನವಾಗಿ ನಿಂತಿದೆ. ತನ್ನ ಆಂತರಿಕ ಬೇಡಿಕೆಗಳನ್ನು ಪೂರೈಸಿಕೊಳ್ಳಲಾಗದೆ, ಅಂತರರಾಷ್ಟ್ರೀಯ ಸಾಲದ ಮಿತಿಯನ್ನು ವಿಸ್ತರಿಸಿಕೊಳ್ಳುತ್ತಾ ನಡೆದಿರುವ ಅಮೆರಿಕಾದಲ್ಲಿ ಪ್ರಥಮ ಬಾರಿಗೆ ಆಂತರಿಕ ಉತ್ಪನ್ನ ದರದಲ್ಲಿ (GDP) ಶೇ ೧ ರಷ್ಟು ಕೆಳಗಿಳಿದಿದೆ. ಅಲ್ಲೂ ಜನತೆ ಚಿನ್ನಕ್ಕೆ ಮುಗಿಬೀಳುವ ಮೂಲಕ ಸರ್ಕಾರದ ವಿಶ್ವಾಸಾರ್ಹತೆಗಳನ್ನು ಶಂಕಿಸುತ್ತಿದ್ದಾರೆ.

ಚಿನ್ನದ ಬೆಲೆ ನ್ಯೂಯಾರ್ಕ್ ಪೇಟೆಯಲ್ಲಿ ಒಂದೇ ದಿನ ಒನ್ಸ್ ಒಂದಕ್ಕೆ ೧೮೯೦ ಡಾಲರ್ ಏರಿಕೆ ಕಂಡಿದೆ. ೧೯೨೦ ರಿಂದ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಚಿನ್ನಕ್ಕೆ ಸುವರ್ಣಕಾಲ ಲಭಿಸಿದೆ. ಅಮೆರಿಕಾದಲ್ಲಿ ಆದಾಯ ಇಳಿಮುಖವಾಗುತ್ತಿದ್ದಂತೆ unproductiveವೆಚ್ಚಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ಸೂರೆನ್ಸ್, ಆಹಾರ, ಆರೋಗ್ಯ ಹಾಗೂ ರಕ್ಷಣಾ ಉತ್ಪಾದನೆಯ ವಲಯಗಳಲ್ಲಿ ಸರ್ಕಾರ ಅಪಾರ ಪ್ರಮಾಣದ ಸಬ್ಸಿಡಿಯನ್ನು ನೀಡಬೇಕಾಗಿರುವುದರಿಂದ ವೆಚ್ಚದಲ್ಲಿ ಸರಿದೂಗಿಸಲು ಹಲವು ಕಸರತ್ತುಗಳನ್ನು ನಡೆಸಬೇಕಾಗಿದೆ. ಅಮೆರಿಕಾದ ಸಾಲ ಮಾರುಕಟ್ಟೆಯಲ್ಲಿ (debt) ನಲ್ಲಿ ಶೇ ೨೬ ರಷ್ಟು ಪಾಲು ನೀಡಿರುವ ಚೀನಾ ಅಮೆರಿಕಾದ ಈ ವಿದ್ಯಮಾನಗಳಿಂದ ಆತಂಕಗೊಂಡು ತನ್ನ ಬಂಡವಾಳ ವಾಪಸಾತಿಗೆ ಒತ್ತಾಯ ಹಾಕಲಾರಂಭಿಸುತ್ತಿದೆ. ಅಮೆರಿಕಾ ಉಪಾಧ್ಯಕ್ಷ ಜಿಮ್ ಬಿಡೆನ್ ಅವರು ಬೈಜಿಂಗ್‌ಗೆ ವಿಶೇಷ ಭೇಟಿ ನೀಡಿ, ನಿಮ್ಮ ಬಂಡವಾಳ ನಮ್ಮಲ್ಲಿ ಸುರಕ್ಷಿತವಾಗಿರಲಿದೆ, ಸರ್ಕಾರವೇ ನಿಮ್ಮ ಸಾಲಕ್ಕೆ ಜಾಮೀನಾಗಿ ನಿಲ್ಲಲಿದೆ. ಎಂದು ಮನವೊಲಿಸಿದ ನಂತರವೇ ಅಲ್ಲಿದ್ದ ಆತಂಕ ತಹಬಂದಿಗೆ ಬಂದು ಮಾರುಕಟ್ಟೆ ಕ್ರಾಸ್ ಆಗುವುದು ತಪ್ಪದೆ.

ಅಮೆರಿಕಾದ ವಿದ್ಯಮಾನಗಳು ಯುರೋಫ್, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಎಲ್ಲಾ ಪ್ರಮುಖ ರಾಷ್ಟ್ರಗಳಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಿದೆ. ಇದೇ ತಾನೇ ಸುನಾಮಿ, ಭೂಕಂಪಗಳ ಹೊಡೆತದಿಂದ ತತ್ತರಿಸಿದ ಜಪಾನ್‌ಗೆ ಸುಧಾರಿಸಿಕೊಳ್ಳಲು ಶಕ್ತಿ ಇಲ್ಲದಂತಾಗಿದೆ. ಭಾರತದಲ್ಲೂ ಅಮೆರಿಕಾದ ಆರ್ಥಿಕ ಕುಸಿತ ನೈತ್ಯಾತ್ಮಿಕ ಪ್ರಭಾವ ಬೀರುತ್ತಿರುವ ಸೂಚನೆಗಳನ್ನು ಲೇಖನದ ಆರಂಭದಲ್ಲಿಯೇ ಪ್ರಸ್ತಾಪಿಸಿದ್ದೇನೆ.

ಒಂದು ರಾಷ್ಟ್ರದ ಆರ್ಥಿಕ ಸದೃಢತೆಯ ಚಿತ್ರಣವನ್ನು ಕಟ್ಟಿಕೊಡಬಲ್ಲ Gross Demostic Product- GDP ೨೦೧೦-೧೧ ರಲ್ಲಿ ೯.೩% ಇದ್ದದ್ದು ಇದೀಗ ೭.೮% ಕ್ಕೆ ಇಳಿದಿದೆ.

ಬಂಡವಾಳದ ಹೂಡಿಕೆಯ ಪ್ರಮಾಣ ದಾಖಲೆಯ ಕುಸಿತ ಕಂಡಿದೆ. ೨೦೧೦-೧೧ ರಲ್ಲಿ ೧೭.೪% ರಷ್ಟಿದ್ದ ಹಣ ಹೂಡಿಕೆಯ ಪ್ರಮಾಣ ೨೦೧೧-೧೨ ರಲ್ಲಿ ಶೇ ೮ ರ ಬಳಿ ನಿಲ್ಲಲಿದೆ.

ಕೈಗಾರಿಕಾ ಉತ್ಪನ್ನಗಳ ಬೆಳವಣಿಗೆಯ ಗುರಿ ಇಳಿದಿಕ್ಕಿನಲ್ಲಿಯೇ ಸಾಗುತ್ತಿದೆ. ಏಪ್ರಿಲ್ ೨೦೧೦ ರಲ್ಲಿ ೧೩.೧% ರಷ್ಟಿದ್ದ ಬೆಳವಣಿಗೆಯ ದರ ಏಪ್ರಿಲ್ ೨೦೧೧ ರಲ್ಲಿ ೬.೩%ಕ್ಕೆ ಇಳಿದಿದೆ.

ಏರುತ್ತಿರುವ ಬಡ್ಡಿ ದರಗಳು ಕೈಗಾರಿಕಾ ವಲಯದ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಯಂತ್ರೋದ್ಯಮಗಳ ಬಂಡವಾಳ ಹೂಡಿಕೆ, ಉಕ್ಕು ಆಮದಿನಲಿ ಕಡಿತ, ಸಿಮೆಂಟ್ ಹಾಗೂ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕುಸಿತ, ರಿಯಲ್ ಎಸ್ಟೇಟ್ ಜಗತ್ತಿನಲ್ಲಿ ಕೊಳ್ಳುವವರೇ ಮುಂದೆ ಬರದೆ ಮಾರಾಟವಾಗದೆ ಉಳಿದ ಆಸ್ತಿಗಳ ಮೊತ್ತದಲ್ಲಿ ಹೆಚ್ಚಳ-ಇವೆಲ್ಲವೂ ಕಾರ್ಪೋರೇಟ್ ಜಗತ್ತನ್ನು ದಿಕ್ಕುಗೆಡಿಸುತ್ತಿವೆ.

೨೦೧೧ ಮಾರ್ಚ್ ವೇಳೆಗೆ ೨,೭೪,೩೬೬ ಕೋಟಿ ರೂಪಾಯಿ ಬಂಡವಾಳ ಹೂಡಲಾದ ೨೮೯ ಯೋಜನೆಗಳು ಪೂರ್ಣಗೊಂಡರೂ ಕೊಳ್ಳುವವರಿಗಾಗಿ ಕಾಯುತ್ತಲಿದೆ. ಅದೇ ರೀತಿ ೨,೫೨,೯೧೨ ಕೋಟಿ ಬಂಡವಾಳ ಹೂಡಿಕೆಯ ೯೮೯ ಯೋಜನೆಗಳು ಇನ್ನೂ ನೆಲಹಂತದಲ್ಲಿಯೇ ಉಳಿದಿವೆ.

ಆರ್ಥಿಕತೆಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಬಂಡವಾಳ ಹೂಡಿಕೆಯ ಗತಿ ಕೂಡ ತನ್ನ momentum ಕಳೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಇದೇ ನಿರುತ್ಸಾಹ ಜನಕ ವಾತಾವರಣ ಮುಂದುವರೆಯುವ ಅಪಾಯಗಳು ಕಾಣಬರುತ್ತಿವೆ.

ಆದ್ಯತಾ ವಲಯಗಳಲ್ಲೂ (core sector) ಇದೇ ನಿರಾಶಾದಾಯಕ ಪರಿಸ್ಥಿತಿ ಕಾಣುತ್ತಿದೆ. ೨೦೦೯-೧೦ ರಲ್ಲಿ ೬.೬೪ ರಷ್ಟಿದ್ದ ಹೂಡಿಕೆಯ ಪ್ರಮಾಣ ಈ ವರ್ಷ೫.೭೨ ಕ್ಕೆ ಕುಸಿದಿದೆ. ಕಲ್ಲಿದ್ದಲು, ಕಚ್ಚಾಎಣ್ಣೆ, ರಸಾಯನಿಕಗಳು, ಉಕ್ಕು, ಸಿಮೆಂಟ್, ವಿದ್ಯುಚ್ಚಕ್ತಿ ಇತ್ಯಾದಿ ಆದ್ಯತಾವಲಯದ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ತೀರಾ ಕಡಿಮೆಯಾಗಿದೆ.

ಹಣದುಬ್ಬರ ( inflation) ಕೂಡ ದೊಡ್ಡ ತಲೆನೋವಾಗಿಯೇ ಮುಂದುವರಿಯಲಿದೆ. ಭಾರತೀಯ ರಿಸರ್ವ ಬ್ಯಾಂಕ್ ಎಷ್ಟೇ ಬಿಗಿಧೋರಣೆ ಅನುಸರಿಸುತ್ತಿದ್ದರೂ, ಹಣದುಬ್ಬರದ ದರ ಶೇ ೧೦ರ ಆಸುಪಾಸಿನಲ್ಲಿಯೇ ಒಲಾಡುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಹಾರ ದಾನ್ಯಗಳ, ಕಚ್ಚಾತೈಲ ಹಾಗೂ ಕಲ್ಲಿದ್ದಲು ಬೆಲೆ ಹೆಚ್ಚಾಗಿ, ಆಮದಿಗೆ ಹೆಚ್ಚು ಹಣ ತೆರಬೇಕಾಗಿರುವುದರಿಂದ ಹಣದುಬ್ಬರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಜೊತೆಗೆ ಕೇಂದ್ರ ಸರ್ಕಾರ ಬತ್ತ, ಮುಸುಕಿನ ಜೋಳ, ಸೋಯಾಬಿನ್‌ಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಬರುವ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಜಾಸ್ತಿಯಾಗುತ್ತದೆಯೇ ಹೊರತಾಗಿ ಕಡಿಮೆಯಾಗುವ ಸಾದ್ಯತೆ ಕಾಣುತ್ತಿಲ್ಲ.

ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸುವಲ್ಲಿ ರಾಷ್ಟ್ರ ವಿಫಲವಾಗುತ್ತಿದೆ ಎಂಬುದು ಆತಂಕಕಾರಿ ಸಂಗತಿ. ೨೦೧೦-೧೧ ರಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ ೧೭ ರಷ್ಟು ಕುಸಿತ ಕಂಡಿದೆ. ೨೦೦೯-೧೦ರಲ್ಲಿ ೩೭.೭ ಬಿಲಿಯನ್ ಡಾಲರ್‌ಗಳಷ್ಟಿದ್ದ ವಿದೇಶಿ ಬಂಡವಾಳ ಹರಿದು ಬಂದರೆ, ಈ ಬಾರಿ ೨೭ ಬಿಲಿಯನ್ ಡಾಲರ್ ಗಳಷ್ಟು ಮಾತ್ರ ಬರುವ ನಿರೀಕ್ಷೆಯಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಳಿತಗಳ ನಡುವೆಯೂ ಅಭಾದಿತವಾಗಿ ಹೆಚ್ಚಾಗುತ್ತಿರುವ ನಮ್ಮ ತೈಲ ಬೇಡಿಕೆಯಿಂದಾಗಿ ನಮ್ಮ ಆಮದು ರಫ್ತಿನ ಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ.

ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡುದಾರಕ್ಕೆ ಎನ್ನುವಂತೆ ರಫ್ತು ಪ್ರಮಾಣದಲ್ಲಿ ಈ ವರ್ಷ ದಾಖಲಾದ ಶೇ ೩೪ರ ಏರಿಕೆ ಹೆಚ್ಚುತ್ತಿರುವ ಆಮದು ಬಿಲ್‌ಗಳ ಮುಂದೆ ಸರಿ ಸಾಟಿಯಾಗಿ ನಿಲ್ಲಲಾಗುತ್ತಿಲ್ಲ. ಇಂಜನಿಯರಿಂಗ್ ಗೂಡ್ಸ್, ರೆಡಿಮೇಡ್ ಗಾರ್ಮೆಂಟ್ಸ್, ಜೆಮ್ಸ್, ಚಿನ್ನಾಭರಣಗಳು ಹಾಗೂ ಔಷಧಿಗಳ ರಪ್ತಿನಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. ಅಕ್ಟೋಬರ್ ೨೦೧೦ ರಲ್ಲಿ ಶೇ೨೬.೮ ರಷ್ಟಿದ್ದ ರಪ್ತು ಪ್ರಮಾಣ ಮಾರ್ಚ್೨೦೧೧ ರ ವೇಳೆಗೆ ೪೪.೩ ರಷ್ಟು ಏರಿಕೆ ಕಂಡಿದೆ. ಏಪ್ರಿಲ್ ೨೦೧೧ ರಲ್ಲಿ ನಮ್ಮ ಒಟ್ಟು ರಫ್ತಿನ ಪ್ರಮಾಣ ೨೩.೮ ಬಿಲಿಯನ್ ಡಾಲರ್ ಗಳಷ್ಟಿದ್ದರೆ, ಅದೇ ಅವಧಿಯಲ್ಲಿ ನಮ್ಮ ಆಮದಿನ ಪ್ರಮಾಣ ೩೨.೮ ಬಿಲಿಯನ್ ಡಾಲರ್ ಗಳಿಗೇರಿದೆ. ತೈಲ ಉತ್ಪಾದಕ ರಾಷ್ಟ್ರಗಳ ತೈಲ ಬೆಲೆಯನ್ನು ಇಳಿಸುವ ಯಾವ ಲಕ್ಷಣಗಳೂ ಕಾಣುತ್ತಿಲ್ಲವಾದ್ದರಿಂದ ಮುಂದಿನ ದಿನಗಳು ಇನ್ನೂ ದುಬಾರಿಯಾಗುವ ಕೆಟ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಕಡಿಮೆ ರಫ್ತು ಹಾಗೂ ಹೆಚ್ಚಿದ ಆಮದು ಎರಡರ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗದೆ, ಅಮೂಲ್ಯ ವಿದೇಶಿ ವಿನಿಮಯ ನಿಧಿಗೆ ಕೈಹಾಕಬೇಕಾಗಿದೆ. ನಮ್ಮ ವಿದೇಶಿ ವಿನಿಮಯ ನಿಧಿ ದಿನೇ ದಿನೇ ಕರಗುತ್ತಲಿದೆ. ಆಗಸ್ಟ್ ೧೨ ರಂದು ಒಂದೇ ದಿನ ೬೨೧ ಮಿಲಿಯನ್ ಡಾಲರ್‌ಗಳಷ್ಟು ನಿಧಿ ಕರಗಿ ಹೋಯಿತು. ಇದೇ ರೀತಿಯಲ್ಲಿ ಫಾರಿನ್ ಎಕ್ಸ್‌ಚೇಂಚ್ ಮೇಲಿನ ಅವಲಂಬನೆ ಮುಂದುವರಿದಿದ್ದೇ ಆದರೆ ೩೧೬.೬೦ ಬಿಲಿಯನ್ ಡಾಲರ್‌ಗಳಷ್ಟೇರುವ ವಿದೇಶಿ ವಿನಿಮಯದ ನಿಧಿ ವರ್ಷ ಒಪ್ಪತ್ತಿನಲ್ಲಿ ಖಾಲಿಯಾಗುವ ಅಪಾಯಗಳು ಕಾಡುತ್ತಿವೆ.

ಇನ್ನು ಅನುತ್ಪಾದಕ ವೆಚ್ಚಗಳು (unproductive expenditure) ವರ್ಷೆ ವರ್ಷೆ ಏರಿಕೆಯಾಗುತ್ತಾ ನಡೆದಿದೆ. ಸರ್ಕಾರದ ಅನುತ್ಪಾದಕ ವೆಚ್ಚ ಏಪ್ರಿಲ್ ೨೦೧೦ ರಲ್ಲಿ ೬೭, ೨೨೬ ಕೋಟಿ ರೂಪಾಯಿಗಳಷ್ಟಿದ್ದು ಏಪ್ರಿಲ್ ೨೦೧೧ ರಲ್ಲಿ ೮೭.೯೩೦ಕ್ಕೇರಿದೆ. ಅದೇ ರೀತಿ ಏಪ್ರಿಲ್ ೨೦೧೦ ರಲ್ಲಿ ೪೮,೨೦೬ ಕೋಟಿ ರೂಪಾಯಿಗಳಷ್ಟಿದ್ದ ಯೋಜನೇತರ ವೆಚ್ಚ (non-plan expenditure) ಏಪ್ರಿಲ್ ೨೦೧೧ರ ವೇಳೆಗೆ ೭೦,೧೨೩ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ರಾಷ್ಟ್ರೀಯ ಉದ್ಯೋಗ ಯೋಜನೆ(ನ.ರೇ.ಗಾ), ಆಹಾರ, ಪೆಟ್ರೋಲಿಯಂ ಹಾಗೂ ರಾಸಾಯನಿಕ ಗೊಬ್ಬರಗಳ ಮೇಲೆ ನೀಡುತ್ತಿರುವ ಸಬ್ಸಿಡಿಯ ಕಾರಣದಿಂದಾಗಿ ಅನುತ್ಪಾದಕ ವೆಚ್ಚ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಗಿದೆ. ಈಗ ಅಣ್ಣಾ ಹಜಾರೆಯವರ ಚಳುವಳಿಯಿಂದ ಉಂಟಾಗುತ್ತಿರುವ ಮಾನ ಹಾನಿಯನ್ನು ಸರಿದೂಗಿಸಿಕೊಳ್ಳಲು, ಕುಸಿಯುತ್ತಿರುವ ತನ್ನ ವರ್ಚಸ್ಸನ್ನು ಮೇಲೆತ್ತಲು ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಕಾಯ್ದೆ( Food Security Act)ಯನ್ನು ಜಾರಿಗೆ ತಂದ್ದದೇ ಆದರೆ, ಆಹಾರ ವಲಯದಲ್ಲಿಯೇ ಕೇಂದ್ರ ಸರ್ಕಾರದ ಸಬ್ಸಿಡಿ ಪ್ರಮಾಣ ೧ ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಲಿದೆ.

ಗಾಯದ ಮೇಲೆ ಬರೆ ಎನ್ನುವಂತೆ ರಿಸರ್ವಬ್ಯಾಂಕ್ ಮತ್ತೊಮ್ಮೆ ಬಡ್ಡಿ ದರಗಳನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿದೆ-ಹಣದುಬ್ಬರವನ್ನು ನಿಯಂತ್ರಿಸುವ ದೂರದ ಆಸೆಯಿಂದಾಗಿ ಬಡ್ಡಿದರಗಳು ಶೇ ೦.೨೫ ರಷ್ಟು ಏರಿಕೆಯಾಗಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಬಡ್ಡಿ ದರ ಏರಿಕೆಯ ನಂತರವೂ ಇದೇ ಈ ನಿರಾಶಾದಾಯಕ ಪರಿಸ್ಥಿತಿ ಮುಂದುವರಿದರೆ, ಮುಂಬರುವ ದಿನಗಳು ಇನ್ನೂ ಕಷ್ಟಕರವಾಗಲಿವೆ.

ಬೆಲೆ ಏರಿಕೆಯ ಬಿಸಿಯಿಂದ ಭಾರತೀಯ ಶ್ರೀ ಸಾಮಾನ್ಯ ತತ್ತರಿಸುತ್ತಿದ್ದಾನೆ. ತೈಲ ಬೆಲೆಯಲ್ಲಿ ವರ್ಷದಿಂದೀಚೆಗೆ ದಾಖಲೆಯ ಪ್ರಮಾಣದ ಏರಿಕೆಯಾಗಿದೆ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ತೆರಿಗೆ ಭರಿಸುತ್ತಿರುವ ದಾಖಲೆ ಭಾರತೀಯರದೇ ಆಗಿ ಉಳಿದಿದೆ. ಬಡವ- ಶ್ರೀಮಂತರ ನಡುವಣ ಅಂತರ ಮತ್ತೆ ಹಿರಿದಾಗುತ್ತಾ ಹೋಗುತ್ತಿದೆ. ತುತ್ತು ಅನ್ನಕ್ಕೆ ಗತಿಯಿಲ್ಲದ ಬಡ ಜನರ ಪ್ರಮಾಣ ಹೆಚ್ಚಾಗುತ್ತಿರುವಂತೆ ಅವರ ಕೊಳ್ಳುವ ಶಕ್ತಿ( purchasing Power) ಕುಂಠಿತಗೊಳ್ಳುತ್ತಿರುವಂತೆಯೇ ಅತ್ಯಾಧುನಿಕ ಐಷಾರಾಮಿ ಕಾರ್‌ಗಳು, ವಿಮಾನಗಳು, ಹೆಲಿಕ್ಯಾಪ್ಟರ್‌ಗಳಿಗೆ ಭಾರತವೇ ನೆಚ್ಚಿನ ಗ್ರಾಹಕರಾಗುತ್ತಾ ಬಂದಿದೆ.

ಇಷ್ಟಾಗಿಯೂ ಆಳುವ ಪ್ರಭುಗಳು ತಮ್ಮ ಆಶಾವಾದ ಕೈಬಿಟ್ಟಿಲ್ಲ. ೨೦೦೭-೧೨ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಶೇ ೮ರ ಬೆಳವಣಿಗೆಯ ಗುರಿಯನ್ನು ಸಾಧಿಸಿದ್ದು ಈ ವರ್ಷ ಅದು ೯ ಗಡಿಯನ್ನು ದಾಟುವ ಮಾತನ್ನಾಡಿದ್ದಾರೆ ನಮ್ಮ ಪ್ರಧಾನಿ, ೨೦೨೫ರ ವೇಳೆಗೆ ಭಾರತ ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಜಿಡಿಪಿ ಹೊಂದಿರುವ ರಾಷ್ಟ್ರವಾಗಲಿದೆ ಎಂಬ ಸುಂದರ ಕನಸನ್ನು ನಮ್ಮ ಮುಂದೆ ಹೆಣೆದು ತಂದಿಡಲು ಪ್ರಧಾನಿ ಮತ್ತವರ ತಂಡ ಶಕ್ತಿಮೀರಿ ಪ್ರಯತ್ನಿಸುತ್ತಲಿದೆ. ಆರ್ಥಿಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ, ಭಾರತವನ್ನು ಜಾಗತಿಕ ರಾಷ್ಟ್ರಗಳ ಸಾಲಿನಲ್ಲಿ ಅತಿಗಣ್ಯ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ ವಿಶ್ವ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ: ಮನಮೋಹನ್ ಸಿಂಗ್ ಈಗಿನ ಸವಾಲುಗಳನ್ನು ಮೆಟ್ಟಿ ನಿಂತು, ಈ ಪವಾಡವನ್ನು ನಡೆಸಲು ಅವಕಾಶ ಸಿಗುತ್ತದೆಯೇ ಎಂಬುದೇ ಈ ಬೃಹತ್ ರಾಷ್ಟ್ರದ ಮುಂದಿರುವ ಪ್ರಶ್ನೆಯಾಗಿದೆ.

ಪುಟದ ಮೊದಲಿಗೆ
Votes: 0 Rating: 0
ಸಿದ್ಧಾರ್ಥ ಅವರಿಗೆ ಎಲ್ಲವುದನ್ನು sensationalize ಮಾಡುವುದು ಚಾಳಿಯೆಂದು ತೋರುತ್ತದೆ.. ಈ ಲೇಖನದ ಶೀರ್ಷಿಕೆಗೂ ಅದರಲ್ಲಿನ ವಸ್ತುವಿಶಯಕ್ಕು ಯಾವುದೇ ರೀತಿಯ ಸಂಬಂಧವಿಲ್ಲ.. ಈಗ ಚಾಲ್ತಿಯಲ್ಲಿರುವ hot topic ಶೀರ್ಷಿಕೆ ಹಾಕಿ ಇಂಟರ್ನೆಟ್-ಇಂದ ಒಂದಷ್ಟು ದತ್ತಾಂಶಗಳನ್ನು (ಡಾಟಾ) ತಂದು ಹಾಕಿ ಕಲಸುಮೇಲೋಗರ ಮಾಡಿಟ್ಟಿದ್ದಾರೆ ಅಷ್ಟೇ.. "ಹಲವಾರು ಕಂಪನಿಗಳ ಮಾರುಕಟ್ಟೆಯಲ್ಲಾದ ಒತ್ತಡದ ಕಾರಣ ಹಲವು ಲಕ್ಷ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದವು." --- ನಷ್ಟ ಅನುಭವಿಸಿದ್ದು ಕಂಪನಿ-ಗಳಲ್ಲ... ಅವುಗಳ ಮಾರುಕಟ್ಟೆ ಮೌಲ್ಯ (ಮಾರ್ಕೆಟ್ ಕ್ಯಾಪಿಟಲೈಜೆಶನ್) ಅಷ್ಟೇ ಕುಸಿದದ್ದು.. ಅದರಿಂದ ಕಂಪನಿ-ಗಳಿಗೆ ಯಾವುದೇ ರೀತಿಯ ಅಕೌಂಟಿಂಗ್ ನಷ್ಟ ಆಗಿಲ್ಲ.. "ಇದು ಅಣ್ಣಾ ಹಜಾರೆ ಅವರ ಚಳುವಳಿ ಉಂಟು ಮಾಡಿರುವ ಪ್ರತಿಕೂಲ ಪರಿಣಾಮ ಎಂದು ಯಾರೂ ಭಾವಿಸಬಾರದು. " -- ಎಲ್ಲರನ್ನು ನಿಮ್ಮಂತಹ ಮೂರ್ಖರೆನ್ದುಕೊಳ್ಳಬೇಡಿ... ಇಂದಿನ ವಿಶ್ವ-ವಾಣಿಜ್ಯದ ಆಗುಹೋಗುಗಳು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಗೊತ್ತು "ದೇಶದಲ್ಲಿ ಅತಿ ದೊಡ್ಡ ಚಿನ್ನದ ಸಂಗ್ರಹ ಹೊಂದಿರುವ ಭಾರತ ಸರ್ಕಾರಕ್ಕೆ ಒಂದೇ ದಿನ ೨೨ ಸಾವಿರ ಕೋಟಿ ರೂಪಾಯಿ ಲಾಭ ಲಬಿಸಿತು" -- ಇದು ಕೇವಲ "ಪೇಪರ್ ಪ್ರಾಫಿಟ್".. ಲಾಭ ಸಿಗುವುದು ಅದನ್ನು ಮಾರಿದಾಗ ಮಾತ್ರ.. "ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ತೆರಿಗೆ ಭರಿಸುತ್ತಿರುವ ದಾಖಲೆ ಭಾರತೀಯರದೇ ಆಗಿ ಉಳಿದಿದೆ. " -- ಸ್ವಾಮಿ, ಇದನ್ನು ಬರೆಯುವಾಗ ನೀವೇನು ಬರೀತಾ ಇದ್ದೀರಿ ಅಂತ ಗೊತ್ತಾಗ್ತಾ ಇತ್ತ ? ಸುಮ್ನೆ ಬಾಯಿಗೆ ಬಂದಿದು ಬರಿಬೇಡ್ರಿ.. ಭಾರತದ ತೆರಿಗೆ ದಾಖಲಾತಿ ಯಾವುದೇ ರೀತಿಯಲ್ಲೂ ಹೆಚ್ಚಲ್ಲ (neither do we have ದಿ highest tax rates in the world, nor do we have largest number of tax payers in the world). ದಯವಿಟ್ಟು ನಿಮಗೆ ಗೊತ್ತಿಲ್ಲದ ವಿಷಯಗಳ ಮೇಲೆ ಸುಮ್ಮನೆ ಬುರುಡೆ ಬಿಡಲು ಹೋಗಬೇಡಿ..ಈ ರೀತಿ ಸಿಕ್ಕಿದ "ಹಾಟ್ ಟಾಪಿಕ್" ಎತ್ತಿಕೊಂಡು ಈ ರೀತಿ ಕಾಗಕ್ಕ-ಗುಬ್ಬಕ್ಕ ಕಥೆ ಬರೆಯುವುದಕ್ಕಿಂತ ಸುಮ್ಮನೆ ಕೂರುವುದೇ ಲೇಸು.. --ರಮೇಶ ಎನ್.,...
Dear Siddhartha, Looks like you have tried to analyse the current market conditions. I did not see any relevance to the title and the article. Be true to the article, this will draw the right audience otherwise you look very stupid!...
"ವಿಶ್ವ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ: ಮನಮೋಹನ್ ಸಿಂಗ್" is this a joke? who are you trying to fool mr. siddhartha? Dr. Singh is an Oxford graduate but there are thousands of such people. He is not rated among even the second tier economists forget being a top tier economist....

ಶನಿವಾರ, ಆಗಸ್ಟ್ 27, 2011

Reactions and my reply to them for the article at Kendasampige

ನಾನು ಕಾಂಗ್ರೆಸ್ ಏಜೆಂಟ್‌ನಾಗಿರಬಹುದು ಎಂಬ ನಿಮ್ಮ ಅಭಿಪ್ರಾಯ ನನ್ನನ್ನು ಹಲವು ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ. ರಾಜೀವ್ ಗಾಂಧಿ ಆಗ ಮಾಜಿಯಾಗಿದ್ದ ಕಾಲ. ಅವರ ಅನುಯಾಯಿಯಾಗಿದ್ದು ನಂತರ ಅವರ ವಿರುದ್ದವೇ ಬಂಡೆದ್ದ ವಿ.ಪಿ.ಸಿಂಗ್ ತಮ್ಮದೇ ಆದ ಒಕ್ಕೂಟವನ್ನು ಸಂಘಟಿಸುತ್ತಿದ್ದ ಕಾಲ. ಅವರ ಆಪ್ತ ಗೆಳೆಯರೂ ಮಾಜಿ ಮುಖ್ಯ ಮಂತ್ರಿಗಳೂ ಆದ ರಾಮಕೃಷ್ಣ ಹೆಗಡೆ ಅವರನ್ನು ಬೆಂಗಳೂರಿಗೆ ಕರೆತಂದಿದ್ದರು. ಜನತಾದಳ ಕಛೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆದಿತ್ತು. ಪತ್ರಕರ್ತನಾಗಿ ನಾನು ಈ ಗೋಷ್ಠ್ಟಿಯಲ್ಲಿ ಭಾಗವಹಿಸಿದ್ದೆ. ಅಮೇರಿಕದ ಯುದ್ದವಿಮಾನಗಳಿಗೆ ಡಿಯಾಗೋಗಾರ್ಸಿಯ ದ್ವೀಪವನ್ನು ತಂಗುದಾಣವಾಗಿ ಬಳಸಲು ಭಾರತ ಅನುಮತಿ ನೀಡಿದ್ದರ ಬಗ್ಗೆ ಆಗ ಬಿಸಿಬಿಸಿ ಚರ್ಚೆ ವಿವಾದಗಳು ನಡೆಯುತ್ತಿದ್ದವು. ಇದಕ್ಕೆ ಅನುಮತಿ ನೀಡಿದ್ದು ರಾಜೀವ್ ಗಾಂಧಿ ಎಂದು ಅವರ ರಕ್ತಕ್ಕಾಗಿ ಪ್ರತಿಪಕ್ಷಗಳು ಹಪ ಹಪಿಸುತ್ತಿದ್ದರೆ ಇದರ ಬಗ್ಗೆ ಬೆಳಕು ಚೆಲ್ಲಬಲ್ಲವರು ರಾಜೀವ್ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ವಿ.ಪಿ. ಸಿಂಗ್ ಅವರೇ ಆಗಿದ್ದರೂ, ತಮ್ಮದೇ ಆದ ರಾಜಕೀಯ ಕಾರಣಗಳಿಗಾಗಿ ಅವರು ಜಾಣ ಮರೆವು ಹಾಗೂ ಮೌನವನ್ನು ಧರಿಸಿದ್ದರು. ಇದೇ ಸಂದರ್ಭದಲ್ಲಿ ವಿ.ಪಿ. ಸಿಂಗ್ ಅವರ ಪತ್ರಿಕಾ ಗೋಷ್ಠಿ ಏರ್ಪಾಟಾಗಿತ್ತು. ನಾನು ವಿ.ಪಿ. ಸಿಂಗ್ ಅವರನ್ನು ಕೇಳಿದ್ದು ಇಷ್ಟೆ ನೀವು ನಿಮ್ಮ ಮೌನದಿಂದ ರಾಜೀವ್ ಗಾಂಧಿಯೇ ಅಪರಾಧಿ ಎನ್ನುವಂತೆ ವರ್ತಿಸುತ್ತಿದ್ದೀರಲ್ಲ? ರಕ್ಷಣಾ ಸಚಿವರಾಗಿ ಆ ಕುರಿತ ಪೈಲ್ ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ಹಾಗೊಂದು ವೇಳೆ ನೀವು ಮುಗ್ದರೇ ಎಂತಿಟ್ಟುಕೊಂಡರೂ ರಾಜೀವ್ ಸಂಪುಟದ ಸಹೋದ್ಯೋಗಿಯಾಗಿ ನೈತಿಕ ಜವಾಬ್ದಾರಿ ನಿಮ್ಮ ಮೇಲೂ ಇದೆ ಎಂದೆನಿಸುವುದಿಲ್ಲವೇ? ಇಂತಹ ಗಂಭೀರ ಪ್ರಶ್ನೆಯನ್ನು ಬೆಂಗಳೂರಿನ ಪ್ರೆಸ್‌ನಿಂದ ನಿರೀಕ್ಷಿಸದೇ ಇದ್ದ ವಿ.ಪಿ. ಸಿಂಗ್ ಕ್ಷಣ ಕಾಲ ವಿಚಲಿತರಾದರು. ನನ್ನ ಪ್ರಶ್ನೆಗೆ ಉತ್ತರ ನೀಡದೆ ಬದಿಯಲ್ಲಿದ್ದ ಹೆಗಡೆ ಕಿವಿಯಲ್ಲಿ ನಮ್ಮೆಲ್ಲರಿಗೂ ಕೇಳುವಂತೆ ಉಸುರಿದರು, ಈ ಮನುಷ್ಯ ಕಾಂಗ್ರೆಸ್ ಏಜೆಂಟ್‌ನಂತೆ ಕಾಣುತ್ತಾನೆ ತಕ್ಷಣವೇ ನಾನು ಆರ್ಭಟಿಸಿದೆ ಜೀವನವಿಡೀ ಕಾಂಗ್ರೆಸ್‌ನ ಉಪ್ಪು ತಿಂದು ಗೆಳೆಯನ ಬೆನ್ನಿಗೆ ಚೂರಿ ಹಾಕಿ ಬಂದವರು ನೀವು ಕಾಂಗ್ರೆಸ್ಸಿಗರಲ್ಲದಿದ್ದರೆ ನಾನು ಕಾಂಗ್ರೆಸ್ ಏಜೆಂಟೇ ಹೌದು. ಕ್ಷಣ ಮಾತ್ರದಲ್ಲಿ ಪತ್ರಿಕಾ ಗೋಷ್ಠಿ ರಣರಂಗವಾಯಿತು. ನನ್ನ ಪತ್ರಿಕಾ ಮಿತ್ರರು ವಿ.ಪಿ. ಸಿಂಗ್ ರವರ ದುರ್ವರ್ತನೆಯನ್ನು ಖಂಡಿಸಿ ಅವರಿಗೆ ಬಹಿಷ್ಕಾರ ಹಾಕುವ ಮಾತನಾಡಿದರು. ಪರಿಸ್ಥಿತಿ ಹತೋಟಿ ಮೀರಿದಂತೆ ಕಂಡಾಗ ಹೆಗಡೆ ತಮ್ಮ ಸಮಯ ಸ್ಪೂರ್ತಿಯನ್ನು ಬಳಸಿ ವಿ.ಪಿ. ಸಿಂಗರ ಪರವಾಗಿ ತಾವು ಕ್ಷಮಾಪಣೆ ಕೇಳುವುದಾಗಿ ಪ್ರಕಟಿಸಿ ಸಿಂಗ್ ಅವರು ನನ್ನ ವಿಷಯದಲ್ಲಿ ಹೀಗೆ ಹೇಳಬಾರದಿತ್ತು ಎಂದು ಅಭಿಪ್ರಾಯಪಟ್ಟರು. ಈ ಘಟನೆ ನಡೆದ ಕೆಲವೇ ಕಾಲದ ನಂತರ ಭಾರತೀಯ ವಾಯುನೆಲೆಯನ್ನು ಬಳಸಿಕೊಳ್ಳಲು ಅಮೇರಿಕಾಗೆ ಅಗತ್ಯವಾದ ಅನುಮತಿ ನೀಡುವ ಕಡತಕ್ಕೆ ಸಿಂಗ್ ಅವರೇ ಸಹಿ ಹಾಕಿದ್ದರು, ಅಂದಿನ ಪ್ರಧಾನಿ ರಾಜೀವ್ ಅಲ್ಲ ಎಂಬುದು ಬಹಿರಂಗವಾಯಿತು. ಈ ಸಂಗತಿ ತಿಳಿದಿದ್ದರೂ ಮಾಜಿ ಗೆಳೆಯನ ವಿರುದ್ದ ಚಕಾರ ಎತ್ತದೇ ಎಲ್ಲಾ ಆರೋಪಗಳನ್ನು ತಾವೇ ನುಂಗಿಕೊಂಡ ರಾಜೀವ್ ಗಾಂಧಿ ಅವರ ದೊಡ್ಡಸ್ಥಿಕೆ ನನಗೆ ಈಗಲೂ ಸ್ಮರಣೆಯಲ್ಲಿದೆ. ಇದಕ್ಕೆ ಕೆಲವೇ ವರ್ಷಗಳ ಮೊದಲು ದೊಡ್ಡಹಳ್ಳಿಯಲ್ಲಿ ನಡೆದ ಪೊಲೀಸ್ ಗೋಲಿಬಾರ್ ಖಂಡಿಸಿ ಕಬ್ಬನ್ ಪಾರ್ಕನಲ್ಲಿ ಉಪವಾಸ ಮುಷ್ಕರ ನಡೆಸಿದ್ದ ದೇವೇಗೌಡರು ನನ್ನ ಪ್ರಶ್ನೆಯಿಂದ ಕುಪಿತರಾಗಿ ನೀವು ಕಾಂಗ್ರೆಸ್‌ನ ಏಜೆಂಟರೇ ಎಂದು ಪ್ರಶ್ನಿಸಿದ್ದರು. ಮುಂದೊಮ್ಮೆ ಬಂಗಾರಪ್ಪ ಮುಖ್ಯ ಮಂತ್ರಿಯಾದಾಗ ನನ್ನನ್ನು ಜನತಾದಳದ ಏಜೆಂಟ್ ಎಂದು ಆರೋಪಿಸಿದ್ದರು. ಯಡಿಯೂರಪ್ಪನವರ ಬಗ್ಗೆ ಇತ್ತೀಚೆಗೆ ಕೆಂಡಸಂಪಿಗೆಯಲ್ಲಿ ಪ್ರಕಟವಾದ ಲೇಖನ ಓದಿದವರೊಬ್ಬರು ನಾನು ಯಡಿಯೂರಪ್ಪನವರಿಗೆ ಸಹಾನುಭೂತಿ ತೋರಿಸಲು ಅವರಿಂದ ಸೈಟ್, ಸೂಟ್ ಕೇಸ್ ಪಡೆದಿರಬಹುದೆಂದು ಆರೋಪಿಸಿದ್ದರು. ಅವರವರ ಭಾವಕ್ಕೆ, ಭಕುತಿಗೆ................ ವಂದನೆಗಳೊಂದಿಗೆ, ಸಿದ್ದಾರ್ಥ...
Re: Dear Sri Siddharth, a few minutes ago I wrote a sufficiently long response to your graceful words but by that time my server had disconnected. So I am once again writing, this time a shorter one, since I feel that you are a good journalist. My only point was regarding what you said about America. I am no lover of any particular country and not a nationalist either, I follow Kuvempu in this matter, in a certain sense. But I want you to see some positive aspects of America. Today's America is not the old colonial America: it is a great experiment in the sense that it is a country made up of people from the rest of the world: it is a mini world. To a certain extent England today is emulating it in this respect. America has set the highest standard of democracy for itself (by the people, for the people, of the people), although ideals may not always materialise. Of which other countries can we say this? Nobody wants to go to Russia or China and seek their citizenship. Why? Let us make India a true democracy where all people can live comfortably and everyone can achieve his or her personal ambitions so that people from elsewhere can seek our citizenship. Child labour, utter inequality of opportunity, female foeticide--you name it and you find it in India. Let us put our house in order first so that no one would like to give adivice to us. Otherwise our sourness amounts to overreaction, and overreactions imply guilt. India has a long way to go; merely saying that ours is the largest democracy in the world is meaningless; if some other country says this, we should not feel proud. India cannot yet bear the mantle of holiness and say touch me not. If we are right, there is no need to be worked up about what another democratic nation said to us. I hope we agree here. kvtirumalesh
"ಮಹಾ ಕವಿ ಗೋಪಾಲ ಕೃಷ್ಣ ಅಡಿಗರನ್ನು ಸ್ಮರಿಸಿ ಹೇಳುವುದಾದರೆ ರಾಜಧಾನಿ ದೆಹಲಿ ಗೊಂದಲಪುರಿಯಾಗಿದೆ." ಅಡಿಗರು ಅತ್ಯಂತ ಪ್ರಾಮಾಣಿಕರಾಗಿದ್ದರು. ಅವರು ಎಂದಿಗೂ ಮೌಲ್ಯಗಳನ್ನು ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ. ಅವರನ್ನು ಸ್ಮರಿಸುವುದಕ್ಕೂ ನೈತಿಕ ಅರ್ಹತೆ ಇರಬೇಕು. ರಾಜಕಾರಣಿಗಳನ್ನು ಓಲೈಸುತ್ತಾ ಅವರ ಪರವಾಗಿ ಬರೆಯುವ ಜನರಿಗೆ ಆ ಅರ್ಹತೆ ಇದೆಯೆ? -- ನಾಣಿ...
hinduvinataha pakshapati patrikegaLu srishTisiruva samasyegaLige sarakAradinda uttara huDukuva paryatna!!!...
"ಸರ್ಕಾರ ಹಾಗೂ ಸಿವಿಲ್ ಸೊಸೈಟಿ ನಡುವೆ ಯಾರೂ ನಿಜಕ್ಕೂ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ತಿರ್ಮಾನಿಸಲಾಗದೆ ಜನ ತಬ್ಬಿಬ್ಬಾಗಿದ್ದಾರೆ." People are confused and frustrated about corruption in India not about Lokpal versus Jan Lokpal. Elected Govt. has not shown any responsibility in handling corruption, instead it is merrily indulging in corruption. The present democratic set up don't give good choice to people to elect, people are forced to elect lesser evil person, not a good people representatives. So in that way democracy in India is failed experiment. Days of anarchy are not far away. Hope and Pray India will not get into disarry and third country does not take advantage of the situation - VidyaShankar...
``ತನ್ನ ಸಾಮ್ರಾಜ್ಯ ಧಾಹಕ್ಕೆ ಇರಾಕ್, ಈಜಿಪ್ಟ್, ಆಫ್‌ಘಾನಿಸ್ತಾನಗಳನ್ನು ಬಲಿತೆಗೆದುಕೊಂಡು ಸತತ ನರಮೇದ ನಡೆಸುತ್ತಿರುವ ದೊಡ್ಡಣ್ಣ ಅಮೆರಿಕಾ ಅಣ್ಣಾ ಚಳುವಳಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬ ಬುದ್ಧಿವಾದ ಹೇಳಲು ಮುಂದೆ ಬರುತ್ತಿದೆ. '' Your otherwise interesting analysis is spoilt by a paranoid hatred of USA. It is not necessary to bring in USA for everything. America's 'advice' may be a routine matter. From an enlightened jouranalist this kind of sweeping remark is not expected. Are you not aware of the mass killings perpetrated by several Arab dictators? And the utter violation of human rights? And the stifling of people's voices? It was because of criticisms such as yours that America took such a long time to intervene in Libya. Now see what is happening in Syria? Do you approve of all these things? I have seen the murder of democracy in Yemen. When you criticize America don't forget the good things that it has done; this will make you a balanced person and your views will have the support of reason. Nothing more is required of a writer. kvtirumalesh...
Re: With due respects to famed poet and writer K V Thirumalesh. After seeing his reaction to my article, I once again verified and cross checked my records and also had interaction with my journalist friends at New Delhi. I learnt through records that on August 12, 2011 ahead of fast threat by Anna Hazare, the US department spokesperson Victoria Nuland,in an official statement released has said " As you know, we support the right of peaceful,non violent protest around the world. That said India is a democracy and we count on India to exercise appropriate democratic restraint in the way it deals with peaceful protest". Immediately the very next day, Government of India has strongly objected to US "poking its nose into the internal affairs of India".[bracketed phrase is mine]. Immediately She retracted by saying that inaccurate reporting in India was the cause and she has excuded confidence in India's ability to manage its internal situation in consistent with democratic values. All of a sudden,John Mc cain,democratic party presidential candidate of 2008 elections emerges at New Delhi on a surprise visit,only to clarify that America neither gets involved nor has any intentions of doing so. However, following strong resentment from the Indian government, John mc ccain has to beat a hasty retreat, cancelling several of his meetings to some" dignitaries". It is not immediately known whether he had plans to meet the civil society members. Drawing inference from the Prime Ministers' remarks at parliament, India is emerging as a powerful country.it will have to be contemplated whether there is any power which wants to destabilize the government and the country. More than 100 countries attained Independence when India got freedom but none of them could reach the place where India reached. I discussed with Prof.Premashekar, a well known political thinker and writer. He is writing an exclusive article on this issue. Still, I wish that my doubts expressed in my article on US interference should remain as doubts only. Thanks Siddartha
"ಸರ್ಕಾರ ಹಾಗೂ ಸಿವಿಲ್ ಸೊಸೈಟಿ ನಡುವೆ ಯಾರೂ ನಿಜಕ್ಕೂ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ತಿರ್ಮಾನಿಸಲಾಗದೆ ಜನ ತಬ್ಬಿಬ್ಬಾಗಿದ್ದಾರೆ." ಇದು ೧೦೦% ಸುಳ್ಳು! ಪ್ರಾಮಾಣಿಕ ಪ್ರಯತ್ನ ಯಾರು ಮಾಡುತ್ತಿದ್ದಾರೆ ಅಂತ ಜನಕ್ಕೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಅಣ್ಣಾ ಹಝಾರೆಗೆ ಬೆಂಬಲ ನೀಡುತ್ತಿದ್ದಾರೆ. ನೀವೇಕೆ ಹೀಗೆ ಹೇಳುತ್ತಿದ್ದೀರಿ ಅಂತ ಅರ್ಥವಾಗುತ್ತಿಲ್ಲ. ಆದರೆ "ಉಗುರಿನಲ್ಲಿ ಚಿವುಟಿ ಹಾಕುವುದಕ್ಕೆ ಕೊಡಲಿಯನ್ನು ಬಳಸಿದಂತಿದೆ ಕೇಂದ್ರ ಸರ್ಕಾರ" ಅಣ್ಣಾ ಚಳುವಳಿಯನ್ನು ಚಿವುಟಿ ಹಾಕಬೇಕೆಂಬ ನಿಮ್ಮ ಧೋರಣೆಯೆ ನೀವು ಯಾರ ಪರ ಇದ್ದೀರಿ ಎಂದು ಸ್ಪಷ್ಟವಾಗಿ ಹೇಳಿದೆ. -- ನಿಖಿಲ್ ಚಂದ್ರನ್...
Re: Can't agree more! This guy is totally biased and works like a press agent of that big-fat-corrupt gang called Congress. Anna's movement is not something that should be killed, but to be accepted, supported and worth dieing for. After all these years of bad rule how can people be confused about who is their well-wisher, utter bullshit. These kind of half-hearted, stupid intellectuals are more evil than goons.

ಶುಕ್ರವಾರ, ಆಗಸ್ಟ್ 19, 2011

My latest article on Anna Hajare movement at www.kendasampige.com

ಸರ್ಕಾರಿ ಲೋಕಪಾಲ VS ಜನಲೋಕಪಾಲ:ಸಿದ್ದಾರ್ಥ ವ್ಯಾಖ್ಯಾನ
ಸಿದ್ಧಾರ್ಥ
ಶುಕ್ರವಾರ, 19 ಆಗಸ್ಟ್ 2011 (03:28 IST)

ರಾಷ್ಟ್ರದ ರಾಜಧಾನಿ ದೆಹಲಿಯಲ್ಲೀಗ ಗೊಂದಲ ಪರ್ವ. ಒಂದೇ ಸಮನೆ ಸುರಿಯುತ್ತಿರುವ ಮಳೆಯಲ್ಲೂ ಹಗರಣಗಳ ಬಿಸಿ, ಪ್ರತಿಭಟನೆಗಳ ಕಾವು ದೆಹಲಿಗರನ್ನು ಸುಡುತ್ತಲಿದೆ. ಕಾಮನ್‌ವೆಲ್ತ್ ಕ್ರೀಡೆಗಳ ಕುರಿತ ಸಿಎಜಿ ವರದಿ ಬಂದಾಯ್ತು, ಸಂಸತ್‌ಗೆ ಅಧಿಕೃತವಾಗಿ ಮಂಡನೆಯಾಗುವ ಮೊದಲೇ ಅದು ದೆಹಲಿಯ ಪತ್ರಿಕೆಗಳಲ್ಲಿ, ಫೇಸ್ ಬುಕ್‌ಗಳಲ್ಲಿ ರಾರಾಜಿಸುತ್ತಿತು, (ಹೀಗೂ ಓದಿಕೊಳ್ಳಿ-ಕರ್ನಾಟಕ-ಲೋಕಾಯುಕ್ತ ವರದಿ-ಯಡಿಯೂರಪ್ಪ). ಸಿಎಜಿ ವಿನೋದ ರಾಮ್ ಭವಿಷ್ಯದ ಟಿಎನ್ ಚತುರ್ವೇದಿ ಆಗಲು ಹೊರಟಿದ್ದಾರೆಂಬ ಅಭಿಪ್ರಾಯಗಳು ಕೇಳಿಬಂದವು. ಸಿಎಜಿಯ ಬಹುಪಾಲು ಆರೋಪಗಳು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಪ್ರದಾನಿಯತ್ತಲೇ ಗುರಿಯಾಗಿದ್ದು ಅವರ ಅವಹೇಳನಕ್ಕೆ ಬಿಜೆಪಿ ಸಂಸತ್‌ನ್ನು ಸಮರ್ಥವಾಗಿ ಬಳಸಿಕೊಂಡಿತು. ಈ ಬಾರಿ ಸಂಸತ್ ಆರಂಭಗೊಂಡಾಗಿನಿಂದ ಒಂದು ದಿನವೂ ಪೂರ್ಣಕಾಲ ಅಧಿವೇಶನ ನಡೆದಿಲ್ಲ. (ಹೇಗಾದರೂ ಮಾಡಿ ಸಂಸತ್‌ನಲ್ಲಿ ಪ್ರತಿ ದಿನವೂ ಗದ್ದಲವೆಬ್ಬಿಸಿ ಸದನ ಮುಂದೂಡುವಂತೆ ಮಾಡಬೇಕೆಂದು ಬಿಜೆಪಿ ಸಂಸದೀಯ ಮಂಡಳಿಯ ಮೇಲೆ ವಿವಿಧ ರಾಜ್ಯ ಘಟಕಗಳು ಒತ್ತಾಯಿಸುತ್ತಿವೆ ಎಂದು ಅಲವತ್ತ್ತುಕೊಂಡಿರುವುದು ಸಾಕ್ಷಾತ್ ಸುಷ್ಮಾಸ್ವರಾಜ್. ವಿವರ ಬೇಕಿದ್ದರೆ ಓದಿ, ಹಿಂದೂ ಆಗಸ್ಟ್ ೧೨, ೨೦೧೧) ಇದರಿಂದ ಸದನದ ಕಲಾಪ ವ್ಯರ್ಥವಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಅಪವ್ಯಯ ನಡೆಯುತ್ತಿದೆ. ಎಂಬ ಸಂಗತಿಯನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ. ನಡೆದ ಕೆಲವೇ ಘಂಟೆಗಳ ಚರ್ಚೆ ಕಾಲದಲ್ಲಿ ಯಡಿಯೂರಪ್ಪ ಹಾಗೂ ಶೀಲಾ ದೀಕ್ಷೀತ್ ಅವರ ಕಂಪಾರೀಸನ್ ಕೂಡ ಸಾಕಷ್ಟು ಧಾರಾಳವಾಗಿ ಪ್ರಸ್ತಾಪವಾಯಿತು.

ಸಿಎಜಿ ವರದಿಯನ್ನು ಬಿಜೆಪಿ ರಾಜಕೀಯ ದಾಳವಾಗಿ ಹೇಗೆ ಬಳಸಿಕೊಂಡಿತು ಎಂಬ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ವರದಿಯಾಗಿರುವುದರಿಂದ ನಾನದರ ವಿಶ್ಲೇಷಣೆಯ ಗೋಜಿಗೆ ಹೋಗದೆ ಒಂದೇ ಒಂದು ಅಂಶವನ್ನು ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ. ಕಾಮನ್‌ವೆಲ್ತ್ ಕ್ರೀಡೆಯ ಸೂರೆಯಲ್ಲಿ ಹಲ ಪತ್ರಕರ್ತರೂ, ಕೆಲ ಪತ್ರಿಕಾ ಮಾಧ್ಯಮಗಳೂ ಸಾಕಷ್ಟು ಪ್ರಯೋಜನ ಪಡೆದರೆಂಬ ಸಂಗತಿ ಸಿಎಜಿ ವರದಿಯಲ್ಲಿ ಬಯಲಾಗಿದೆ. ಉದಾಹರಣೆಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಕ್ರೀಡೆ ಕುರಿತ ವೆಬ್ ಸೈಟ್ ರೂಪಿಸಿ, ಕ್ರೀಡಾವಳಿಯ ವಿವರಗಳನ್ನು ಅಪ್ ಡೇಟ್ ಮಾಡುವ ಕಂಟ್ರಾಕ್ಟ್ ನೀಡಲಾಗಿತ್ತು. ಹಾಗೆಯೇ ವಾಣಿಜ್ಯ ಜಾಹಿರಾತುಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಎನ್‌ಡಿ ಟಿವಿ ಹಾಗೂ ಸಿಎನ್‌ಎನ್-ಐಬಿಎನ್ ಸಂಸ್ಥೆಗಳಿಗೆ ನೀಡಿತ್ತು. ನಿರೀಕ್ಷಿತ ಸೇವೆ ಸಲ್ಲಿಸಲು ಈ ಎಲ್ಲ ಸಂಸ್ಥೆಗಳು ವಿಫಲವಾಯಿತಾದರೂ ಸಂಭಾವನೆಯ ರೂಪದಲ್ಲಿ ಹಲವಾರು ಕೋಟಿ ರೂಪಾಯಿ ದುರುಪಯೋಗವಾಯಿತು.
ಸಿಎಜಿ ವರದಿಯನ್ನು ಸಂಸತ್‌ನಲ್ಲಿ ಜಾಲಾಡಿದ ರಾಜಕಾರಣಿಗಳು, ಪತ್ರಿಕೆಗಳು, ರಾಷ್ಟ ಮಟ್ಟದ ಮಾಧ್ಯಮಗಳಲ್ಲಿ ಮಾಧ್ಯಮ ಲೋಕದ ಈ ಹಂಗಾಮ ಬೆಳಕಿಗೆ ಬಾರದಂತೆ ಹೇಗೆ ಮುಚ್ಚಿ ಹೋಯಿತು ಎಂಬುದನ್ನು ಬಲ್ಲವರೇ ಹೇಳಬೇಕು. ಈ ವಿಷಯವನ್ನು ಇಲ್ಲಿಯೇ ಬಿಟ್ಟು ಪ್ರಸಕ್ತ ವಿದ್ಯಮಾನಗಳತ್ತ ಬರುತ್ತೇನೆ.

ಯುಪಿಎ ಸರ್ಕಾರ ತಾನು ವಾಗ್ದಾನ ಮಾಡಿದ್ದಂತೆ ಇದೇ ಮಳೆಗಾಲದ ಅಧಿವೇಶನದಲ್ಲಿ ಲೋಕಪಾಲ ಮಸೂದೆಯನ್ನು ಮಂಡಿಸುವಲ್ಲಿ ಯಶಸ್ವಿಯಾಯಿತು. ತಮ್ಮದೇ ಜನಲೋಕಪಾಲ ಮಸೂದೆ ಜಾರಿಯಾಗಬೇಕು ಎಂದು ಒತ್ತಾಯಿಸುತ್ತಾ ಬಂದಿರುವ ಅಣ್ಣಾ ಹಜಾರೆ ಸರ್ಕಾರಿ ಮಸೂದೆಯ ಪ್ರತಿಯನ್ನು ಸುಟ್ಟು ಹಾಕಿ ಪ್ರತಿಭಟಿಸಿದ್ದೇ ಅಲ್ಲದೇ, ಇದೀಗ ನಿರಶನದ ಹಾದಿಯನ್ನು ಹಿಡಿದಿದ್ದಾರೆ. ತೀರಾ ತಿಳಿಗೇಡಿಯಂತೆ ವರ್ತಿಸಿದ ಕೇಂದ್ರ ಸರ್ಕಾರ ಹಜಾರೆ ಅವರನ್ನು ಬಂಧಿಸುವ ಮೂಲಕ ಮತ್ತಷ್ಟು ರಾಡಿಯನ್ನು ತನ್ನ ಮುಖದ ಮೇಲೆ ಎರಚಿಕೊಂಡಿದೆ. ರಾಷ್ಟ್ರವ್ಯಾಪಿ ದಿನವಿಡೀ ಸುದ್ದಿ ಹರಡುತ್ತಿರುವ ೨೪x೭ ಛಾನಲ್‌ಗಳ ಕೃಪೆ-ಅಣ್ಣಾ ಅವರ ಪರವಾಗಿ ಪ್ರತಿಭಟನೆ ಪ್ರದರ್ಶನಗಳು ತೇಜಿಯಿಂದ ನಡೆಯುತ್ತಿವೆ. ಇದೊಂದು ಕಿಂದರಿಜೋಗಿಯ ಕಥೆಯಾಗುತ್ತಿದ್ದು ಅಂತ್ಯದಲ್ಲಿ ಬಲಿಯಾಗುವವರು ಯಾರಾಗಬಹುದು ಎಂಬ ವಿಶ್ಲೇಷಣೆಗೆ ಸದ್ಯಕ್ಕೆ ನಾನು ಹೋಗದೆ ಲೋಕಪಾಲ ಮಸೂದೆ ನಡೆದುಬಂದ ದಾರಿಯತ್ತ ಕಣ್ಣು ಹಾಯಿಸುತ್ತೇನೆ.

ಇಂಗ್ಲೆಂಡಿನಲ್ಲಿ ಒಂಬುಡ್ಸ್‌ಮನ್ (Ombudsman)ಇರುವ ರೀತಿಯಲ್ಲಿ ರಾಷ್ಟ್ರಕೊಬ್ಬರು ಲೋಕಪಾಲರಿರಬೇಕೆಂಬ ಅಗತ್ಯವನ್ನು ೧೯೬೩ ರಲ್ಲಿಯೇ ಕಂಡುಕೊಳ್ಳಲಾಯಿತು.
೧೯೬೬ ರಲ್ಲಿ ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆಯ ಆಡಳಿತ ಸುದಾರu ಸಮಿತಿ(Administative Reforms Commission)ಆಡಳಿತಾಂಗದಲ್ಲಿ ಭ್ರಷ್ಟಾಚಾರ ನಿವಾರಣೆಗೆ ರಾಷ್ಟ್ರ ಮಟ್ಟದಲ್ಲಿ ಲೋಕಪಾಲ, ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳ ರಚನೆಗೆ ಶಿಪಾರಸ್ಸು ಮಾಡಿತ್ತು.

ಮೊದಲನೆಯ ಲೋಕಪಾಲ ಮಸೂದೆಯನ್ನು ಇದೇ ಇಂದು ಅಣ್ಣಾ ಟೀಂ ನಲ್ಲಿ ಸಕ್ರಿಯರಾಗಿರುವ ಅಂದಿನ ಕಾನೂನು ಸಚಿವ ಶಾಂತಿಭೂಷಣ್ ಅವರಿಂದಲೇ ೧೯೬೮ರಲ್ಲಿ ಮಂಡಿಸಲಾಗಿತ್ತು. ಅದು ಆಗ ಲೋಕಸಭೆಯಲ್ಲಿ ಅಂಗೀಕಾರ ಪಡೆಯಿತಾದರೂ, ರಾಜ್ಯಸಭೆಯಲ್ಲಿ ರಿಜೆಕ್ಟ್ ಆಯಿತು. ತದನಂತರ ೧೯೭೧, ೧೯೭೭, ೧೯೮೫, ೧೯೮೯, ೧೯೯೬, ೧೯೯೮ ಹಾಗೂ ೨೦೦೧ ರಲ್ಲಿ ಲೋಕಪಾಲ ಮಸೂದೆ ಮಂಡಿತವಾಗಿತ್ತು. ೨೦೦೧, ೧೯೯೮ ಹಾಗೂ ೧೯೯೬ ರಲ್ಲಿ ಮೂರು ಬಾರಿ ಮಸೂದೆಯನ್ನು ಜಂಟೀ ಸಲಹ ಸಮಿತಿಗಳ ಪರಿಶೀಲನೆಗೆ ಒಪ್ಪಿಸಲಾಯಿತು.

ಈ ಮದ್ಯೆ ೧೯೮೩ರಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಬಂದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಲೋಕಾಯುಕ್ತ ಮಸೂದೆಯನ್ನು ಹುಟ್ಟುಹಾಕಿ ಹೊಸ ಇತಿಹಾಸಕ್ಕೆ ನಾಂದಿ ಹಾಕಲಾಯಿತು. (ಆನಂತರ ಇದೇ ಲೋಕಾಯುಕ್ತ ಸಂಸ್ಥೆಯನ್ನು ಹೆಗಡೆ ಅವರ ರಾಜಕೀಯ ವಿರೋಧಿ ದೇವೇಗೌಡರನ್ನು ಬಲಿ ಹಾಕಲು ಬಳಸಿಕೊಳ್ಳಲಾಯಿತು. ಆ ಮಾತು ಬೇರೆ)

ಮೇಲೆ ಹೇಳಿದಂತೆ ೧೯೬೮ರಿಂದ ೨೦೦೧ರ ತನಕ ೩೩ ವರ್ಷಗಳ ಅವದಿಯಲ್ಲಿ ೮ ಬಾರಿ ಲೋಕಪಾಲ ಮಸೂದೆ ಮಂಡಿಸಲಾಯಿತಾದರೂ ನಾನಾ ಕಾರಣಗಳಿಂದಾಗಿ ಅವು ಕಾಯ್ದೆಯಾಗಲಿಲ್ಲ.

೨೦೦೨ ಅಂದಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ರಚನೆಯಾದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲ ಸಂವಿಧಾನ ತಿದ್ದುಪಡಿ ಪರಿಶೀಲನಾ ಸಮಿತಿ ರಾಷ್ಟ್ರ ಮಟ್ಟದಲ್ಲಿ ಲೋಕಪಾಲ ಸಂಸ್ಥೆ ಸ್ಥಾಪನೆಗೆ ಶಿಫಾರಸ್ಸು ಮಾಡಿತ್ತು. ಅಲ್ಲದೆ ಉದ್ದೇಶಿತ ಮಸೂದೆಯ ವ್ಯಾಪ್ತಿಯಿಂದ ಪ್ರಧಾನ ಮಂತ್ರಿ ಹುದ್ದೆಯನ್ನು ದೂರ ಇಡಬೇಕೆಂದು ಹೇಳಿತ್ತು.
೨೦೦೫ರಲ್ಲಿ ವೀರಪ್ಪಮೋಯ್ಲಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಕೂಡ ಲೋಕಪಾಲ ಸಂಸ್ಥೆ ಆರಂಭಕ್ಕೆ ಒತ್ತಾಯಿಸಿತ್ತು. ೨೦೦೯ ಲೋಕಸಭಾ ಚುನಾವಣೆಯಲ್ಲಿ ಯುಪಿಎ ತನ್ನ ಚುನಾವಣೆ ಪ್ರನಾಳಿಕೆಯಲ್ಲಿ ಲೋಕಪಾಲ ಮಸೂದೆ ಮಂಡನೆಗೆ ವಿಶೇಷ ಒತ್ತು ನೀಡಿತ್ತು.

ರಾಷ್ಟ್ರದಲ್ಲಿ ವ್ಯಾಪಕವಾಗಿ ಕಪ್ಪುಹಣ ಚಾಲನೆಯಲ್ಲಾಗುವ ಬಗ್ಗೆ, ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರನೇಕರು ಬಿಲಿಯನ್ ಗಟ್ಟಲೆ ಲೆಕ್ಕರಹಿತ ಹಣ ಇಟ್ಟಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದ್ದಂತೆ, ಅದು ವ್ಯಾಪಕವಾಗಿ ಚಳುವಳಿಯ ಸ್ವರೂಪ ಪಡೆಯಲಾರಂಬಿಸಿತು. ಹಲವರ ಸ್ವಯಂ ಘೋಷಿತ ನಾಯಕರುಗಳೂ ಹುಟ್ಟಿಕೊಂಡರು.
ದೇಶ ವಿದೇಶಗಳಲ್ಲಿ ತನ್ನ ಯೋಗ ಪ್ರದರ್ಶನದಿಂದ ಸಾವಿರಾರು ಕೋಟಿ ರೂಪಾಯಿಗಳನ್ನು, ಡೆಹ್ರಾಡೂನ್ ಪರ್ವತ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಗುಡಿಸಿ ಗುಡ್ಡೆ ಹಾಕಿಕೊಂಡ ಬಾಬಾ ರಾಂದೇವ್ ಇಂತಹ ನಾಯಕರಲ್ಲಿ ಒಬ್ಬರು. ಮತ್ತೊಬ್ಬರು ರಾಲೇಗಾಂ ಸಿದ್ದಿ ಎಂಬ ಸಣ್ಣ ಗ್ರಾಮದಿಂದ ಬಂದ ಮಾಜಿ ಸೈನಿಕರು ಕಿಶನ್ ಬಾಬೂರಾವ್ ಅಲಿಯಾಸ್ ಅಣ್ಣಾ ಹಜಾರೆ. ಇವರೊಂದಿಗೆ ಕೈ ಜೋಡಿಸಿದವರು ವೃತ್ತಿಯಲ್ಲದ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿದ್ದ ಮಾಜಿ ಪೊಲೀಸ್ ಅಧಿಕಾರಿಣಿ ಕಿರಣ್ ಬೇಡಿ, ಆರ್.ಟಿ.ಐ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಸ್ವಯಂ ಶ್ರೀ ಶಾಂತಿಭೂಷಣ್ ಮತ್ತವರ ಮಗ ನ್ಯಾಯವಾದಿ ಪ್ರಶಾಂತ್ ಭೂಷಣ್. ಜೊತಗೆ ನಮ್ಮ ಸ್ಥಳೀಯರಾದ ಈಗ ಮಾಜಿ ಆದ ಸಂತೋಷ್ ಹೆಗಡೆ ರವರು. (ಇಂದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ರೂಪಿಸಿ ಜಾರಿಗೆ ತಂದದ್ದು ಯುಪಿಎ ಸರ್ಕಾರವೇ ಎಂಬ ಸಂಗತಿಯನ್ನು ಈಗ ಯಾರೂ ಏಕೆ ಸ್ಮರಿಸಿಕೊಳ್ಳಲು ಒಲ್ಲರೋ ತಿಳಿಯದಾಗಿದೆ.)

ಹಲವಾರು ಪ್ರತಿಭಟನೆ ಆಂದೋಲನಗಳ ತರುವಾಯ ಅಣ್ಣಾ ಹಜಾರೆ ಟೀಂ ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರಥಮ ಭಾರಿಗೆ ಉಪವಾಸ ಕೈಗೊಂಡಿತ್ತು. ೭ ದಿನಗಳ ಈ ನಿರಶನಕ್ಕೆ ಮಣಿದ ಕೇಂದ್ರ ಸರ್ಕಾರ ಲೋಕಪಾಲ ಮಸೂದೆ ಜಾರಿಗೆ ತರುವುದಾಗಿ ಪ್ರಕಟಿಸಿತು. ಸರ್ಕಾರ ಹಾಗೂ ಸಿವಿಲ್ ಸೊಸೈಟಿ (ಅಣ್ಣಾ ಟೀಂ ಅನ್ನು ಈಗ ಈ ಹೆಸರಿನಿಂದ ಗುರುತಿಸಲಾಗುತ್ತಿದೆ.) ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಿ ಅದಕ್ಕೆ ಪ್ರಣವ್ ಮುಖರ್ಜಿಯವರ ನಾಯಕತ್ವ ನೀಡಲಾಯಿತು.

ಸಿವಿಲ್ ಸೊಸೈಟಿ ಸದಸ್ಯರ ವಿಚಿತ್ರ ಬೇಡಿಕೆಗಳ ನಡುವೆಯೂ ಸಮಿತಿ ತನ್ನ ಕಲಾಪ ನಡೆಸಿತು. ಸಮಿತಿ ರಚಿಸಿದ ವರದಿ ಅಣ್ಣಾ ಟೀಂಗೆ ಒಪ್ಪಿಗೆಯಾಗಲಿಲ್ಲ. ಅದು ತನ್ನದೇ ಆದ ಜನಲೋಕಪಾಲ ಮಸೂದೆಯನ್ನು ಸಿದ್ಧಗೊಳಿಸಿ ಅದನ್ನೇ ಅಂತಿಮ ಕಾಯ್ದೆಯನ್ನಾಗಿ ಒಪ್ಪಬೇಕೆಂದು ಒತ್ತಾಯಿಸಿತು.

ಹೀಗೆ ಸರ್ಕಾರಿ ಲೋಕಪಾಲ ಹಾಗೂ ಜನಲೋಕಪಾಲ ಎರಡು ಪ್ರತ್ಯೇಕ ವರದಿಗಳು ಸಿದ್ದಗೊಂಡು ಸಮಿತಿಯ ಉದ್ದೇಶ ವಿಫಲಗೊಂಡಿತ್ತು.

ಸರ್ವಸಮ್ಮತ ಮಸೂದೆಯನ್ನು ರೂಪಿಸುವುದು ಸಮಿತಿಗೆ ಅಸಾದ್ಯವಾಗಿ, ಅಂತಿಮವಾಗಿ ಸರ್ಕಾರ ತನ್ನದೇ ಆದ ಮಸೂದೆಯನ್ನು ಸದನದಲ್ಲಿ ಮಂಡಿಸುವ ಮೂಲಕ ಒಂದು ಘಟ್ಟ ಮುಗಿದು ಮತ್ತೊಂದರ ಆರಂಭವಾಯಿತು.

ನಿರೀಕ್ಷಿಸಿದಂತೆ ಉಗ್ರ ಪ್ರತಿಕ್ರಿಯೆ ಬಂದಿದ್ದು ಟೀಂ ಅಣ್ಣಾ ತಂಡದಿಂದ. ಸರ್ಕಾರಿ ಲೋಕಪಾಲ ವರದಿಯ ಪ್ರತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದ ಗಾಂಧಿ ವಾದಿ ಜನಲೋಕಪಾಲ ಮಸೂದೆಯನ್ನು ಯಥಾವತ್ ಅಂಗೀಕರಿಸದಿದ್ದರೆ ತಾವು ಅಮರಣಾಂತ ಉಪವಾಸ ಹೂಡುವ ನಿರ್ಧಾರವನ್ನು ಪುನರುಚ್ಚರಿಸಿದರು.

೨೦೦೩ ರಲ್ಲಿ ಲೋಕಪಾಲ ವ್ಯಾಪ್ತಿಯಿಂದ ಪ್ರಧಾನಿ ಹುದ್ದೆಯನ್ನು ದೂರವಿಡಬೇಕೆಂದು ಪ್ರತಿಪಾದಿಸಿದ್ದ ಬಿಜೆಪಿ ಈ ಬಾರಿ ತನ್ನ ದನಿಯನ್ನೇ ಬದಲಿಸಿತು.

ಲೋಕಪಾಲ ಮಸೂದೆ ಬ್ರಷ್ಟಾಚಾರ ವಿರೋಧಿಯಾಗಿದ್ದು ಅದರ ನಿರ್ಮೂಲನೆಗೆ ಸಹಕಾರಿಯಾಗುವ ಅಂಶಗಳನ್ನು ಒಳಗೊಂಡಿರಬೇಕೆಂಬುದು ಎಲ್ಲರ ನಿರೀಕ್ಷೆ. ಸರ್ಕಾರಿ ಮಸೂದೆಯಲ್ಲಿ ಈ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬುದು ಚರ್ಚೆಯ ಸಂಗತಿಯಾಗಬೇಕು. ಆದರೆ ಮಸೂದೆ ಧಲಿತ ವಿರೋಧಿ, ಬಡ ಜನರ ವಿರೋಧಿ ಯಾಗಿದೆ ಎಂದು ಅಣ್ಣಾ ಟೀಂ ಆರೋಪಿಸುತ್ತಿದೆ.

ವಾಸ್ತವವಾಗಿ ನೋಡಿದರೆ ಸರ್ಕಾರಿ ಲೋಕಪಾಲ, ಜನ ಲೋಕಪಾಲ ಎರಡು ಮಸೂದೆಗಳ ಒಳ ಉದ್ದೇಶ ಒಂದೇ ಆಗಿದೆ. ಅದು ಸರ್ಕಾರಿ ಭಾಷೆಯಲ್ಲಿದ್ದರೆ ಇದು ಭಾವನಾತ್ಮಕ ಭಾಷೆಯಲ್ಲಿದೆ.

ಸರ್ಕಾರಿ ಮಸೂದೆ ಪ್ರಧಾನಿ, ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಂಸತ್ ಸದಸ್ಯರ ಕೃತ್ಯಗಳು ಹಾಗೂ ಉನ್ನತ ನ್ಯಾಯಾಂಗವನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಟ್ಟರೆ, ಈ ಮೂರನ್ನು ಸೇರಿಸಲೇ ಬೇಕೆಂದು ಆಗ್ರಹಿಸುತ್ತದೆ ಜನಲೋಕಪಾಲ. ವಿಷಲ್ ಬ್ಲೋಯರ್ (Wistle Blowers)ಗಳೆಂಬ ಹಣೆಪಟ್ಟಿಯಡಿ ಮಾಹಿತಿದಾರರಿಗೆ ವಿಶೇಷ ಹಕ್ಕು, ಸವಲತ್ತು, ರಕ್ಷಣೆ ಹಾಗೂ ಹಣವನ್ನು ನೀಡಲು ಜನಲೋಕಪಾಲ ಬಯಸಿದರೆ, ಸುಳ್ಳು ಮಾಹಿತಿ ನೀಡಿದ್ದು ಸಾಬೀತಾದರೆ ಮಾಹಿತಿ ದಾರರಿಗೆ ಶಿಕ್ಷೆ ವಿಧಿಸುವ ಮಾತಾಡುತ್ತದೆ ಸರ್ಕಾರಿ ಲೋಕಪಾಲ. ಲೋಕಪಾಲರನ್ನು ಆರಿಸಲೆಂದೆ ಒಂದು ಶೋಧನಾ ಸಮಿತಿ ಇರಬೇಕು (Search Commitee)ಅದು ನೀಡುವ ಹೆಸರುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ ಮುಖ್ಯ ನ್ಯಾಯಾಧೀಶರ ನೇತೃತ್ವದ ಆಯ್ಕೆ ಸಮಿತಿ ಇರಬೇಕು. ಜನಲೋಕಪಾಲ ಬಯಕೆ. ಈ ಎಲ್ಲಾ ಕಾರ್ಯಹೊಣೆಯನ್ನು ಪ್ರಧಾನಿ ಮಂತ್ರಿ ನೇತೃತ್ವದ ಆಯ್ಕೆ ಸಮಿತಿಯೇ ಮಾಡಲಿ ಎನ್ನುತ್ತದೆ ಸರ್ಕಾರಿ ಲೋಕಪಾಲ. ಸ್ವಯಂ ಲೋಕಪಾಲರನ್ನು ಡಿವೈಎಸ್‌ಪಿ ಧರ್ಜೆಗೆ ಕಡಿಮೆಯಲ್ಲದ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಅವರಿಗೆ (search, seizur) ಮಾಡುವ ಅಧಿಕಾರವಿರಬೇಕು. (ಊಹಿಸಿಕೊಳ್ಳಿ-ಲೋಕಪಾಲ ಸಂತೋಷ್ ಹೆಗಡೆಯವರು ಭ್ರಷ್ಟ ಯಡಿಯೂರಪ್ಪನ ಮನೆಗೆ ನುಗ್ಗಿ ಶೋಧನೆ ನಡೆಸುವ ದೃಶ್ಯವನ್ನು) ಎಂದು ಜನಲೋಕಪಾಲ ಬಯಸಿದರೆ, ಲೋಕಪಾಲ ಅಧೀನದಲ್ಲಿರುವ ಪೊಲೀಸ್ ವ್ಯವಸ್ಥೆಗೆ ವ್ಯಾಪಕ ಅಧಿಕಾರ ನೀಡಲಿದೆ ಸರ್ಕಾರಿ ಲೋಕಪಾಲ. ಲೋಕಪಾಲರನ್ನು ತೆಗೆಯಲು ಸುಪ್ರೀಂಕೋರ್ಟಿಗೆ ಮಾತ್ರ ಅಧಿಕಾರ ಎನ್ನುತ್ತದೆ ಜನಲೋಕಪಾಲ. ಇಲ್ಲ, ಕೇಂದ್ರ ಸರ್ಕಾರವೇ ಅಂತಿಮ ಎನ್ನುತ್ತದೆ ಸರ್ಕಾರ. ರಾಷ್ಟ್ರದ ಒಟ್ಟು ವರ್ಷಾದಾಯದಲ್ಲಿ ಶೇ. ಅರ್ಧ ಪೈಸೆ ತನ್ನ ಖರ್ಚಿಗೆ ಬೇಕು ಎನ್ನುತ್ತದೆ ಜನಲೋಕಪಾಲ. ರಾಷ್ಟ್ರದ ಸಂಚಿತ ನಿಧಿಯಿಂದ (consolidated fund) ಎಷ್ಟೂ ಬೇಕಾದರೂ ಕೊಡಲು ಸಿದ್ದ ಎನ್ನುತ್ತದೆ ಸರ್ಕಾರಿ ಲೋಕಪಾಲ. ಪೋನ್ ಕದ್ದಾಲಿಕೆಯ ಅಧಿಕಾರ ಲೋಕಪಾಲರಿಗೆ ಇರಲಿ ಎಂದು ಜನಲೋಕಪಾಲ ಬಯಸಿದರೆ, ಇಲ್ಲ ಅದು ಗೃಹ ಕಾರ್ಯದರ್ಶಿಗಳಿಗೇ ದತ್ತವಾಗಿರಲಿ ಎನ್ನುತ್ತದೆ ಸರ್ಕಾರಿ ಲೋಕಪಾಲ.

ಈ ಬೇಕು ಬೇಡಗಳ ಪಟ್ಟಿಯನ್ನು ಮತ್ತಷ್ಟು ಲಂಬಿಸದೆ ಮುಂದಿನ ವಿದ್ಯಮಾನಗಳತ್ತ ತೆರಳಲು ತಮ್ಮ ಅನುಮತಿಯನ್ನು ಬಯಸುತ್ತೇನೆ. (ಜನಲೋಕಪಾಲ ಹಾಗೂ ಸರ್ಕಾರಿ ಲೋಕಪಾಲ ಎರಡೂ ಮಸೂದೆಗಳು ಕೆಂಡ ಸಂಪಿಗೆಯ ಸಂಪಾzಕರಲ್ಲಿ ಲಬ್ಯವಿರುತ್ತದೆ. ಓದುಗರು ಅಧ್ಯಯನ ಮಾಡಲು ಬಯಸಿದ್ದಲ್ಲಿ ಮಿಂಚಂಚೆಯ ಮೂಲಕ ಪಡೆದುಕೊಳ್ಳಬಹುದು)
ಮೊದಲೇ ಹೇಳಿದಂತೆ ತಾವು ಮುಂದಿಟ್ಟಿದ್ದ ಮಸೂದೆಯನ್ನು ತಿರಸ್ಕರಿಸಿ ಸರ್ಕಾರಿ ಮಸೂದೆಯನ್ನು ಸಧನದಲ್ಲಿ ತರುವ ಧೈರ್ಯವನ್ನು ತೋರಿದ್ದಕ್ಕಾಗಿ ಅಣ್ಣಾ ಹಜಾರೆ ಎಂಬ ಗಾಂಧಿ ಮಹಾತ್ಮ ಕಿಡಿ ಕೆಂಡವಾಗಿದ್ದಾರೆ.

ಸರ್ಕಾರಿ ಮಸೂದೆಯ ಬಹು ಮೆಚ್ಚಗೆಯ ಅಂಶಗಳತ್ತ ಜನರನ್ನು ಒಲಿಸಿಕೊಳ್ಳುವಲ್ಲಿ ವಿಫಲರಾದ ಕೇಂದ್ರ ಪಡೆ ಅಣ್ಣಾ ಹಜಾರೆಯವರ ಭೂತವನ್ನು ಕೆದಕಿ ಹಗರಣಗಳನ್ನು ಹುಡುಕುವ ಕೆಲಸಕ್ಕೆ ಕೈಹಾಕಿದೆ. ಎಂದೋ ಯಾವಾಗಲೋ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಣ್ಣಾ ಹಜಾರೆ ಸ್ವಂತಕ್ಕೆಂದು ಟ್ರಸ್ಟ್ ಹಣದಿಂದ ಒಂದೆರಡು ಲಕ್ಷ ರೂಪಾಯಿ ತೆಗೆದುಕೊಂಡಿದ್ದರೆಂಬ ಸಂಗತಿಯನ್ನು ಭೂತ ಕನ್ನಡಿಯಲ್ಲಿಟ್ಟು ತೋರಿಸುವ ಪ್ರಯತ್ನ ನಡೆದಿದೆ.

ಅಣ್ಣಾ ಹಜಾರೆ ಭ್ರಷ್ಟರಲ್ಲ ಎಂಬುದರ ಬಗ್ಗೆ ಎರಡು ಮಾತಿಲ್ಲ ನಿಜ. ಆದರೆ ಭ್ರಷ್ಟತೆಯ ವಿರುದ್ದ ಜನ ಸಮರವನ್ನೇ ಸಾರಿರುವ ಅವರು ಬಿಜೆಪಿಯ ಭ್ರಷ್ಟತೆಯ ಬಗ್ಗೆ ಕಂಡೂ ಕಾಣದಂತೆ ಇರುತ್ತಾರೆ ಎಂಬ ಆರೋಪ ಸಂಪೂರ್ಣವಾಗಿ ಹುಸಿಯೇನಲ್ಲ ಅನ್ನಿಸುತ್ತದೆ. ಅವರು ಬೆಂಗಳೂರಿಗೆ ಬಂದಾಗ ನಮ್ಮ ಯಡಿಯೂರಪ್ಪನವರ ಭ್ರಷ್ಟತೆಯ ಬಗ್ಗೆ ಚಕಾರ ಎತ್ತದೇ ಇದ್ದದನ್ನು ಕಂಡಾಗ. ನರೇಂದ್ರಮೋದಿಯನ್ನು ವಾಚಾಮಗೋಚರವಾಗಿ ಹೊಗಳಿ ತಮ್ಮ ಟೀಂ ಸದಸ್ಯರಲ್ಲಿ ಸಾಕಷ್ಟು ಮುಜುಗರ ಕಸಿವಿಸಿ ಉಂಟುಮಾಡಿದ ಅಣ್ಣಾ ಇತ್ತೀಚಿನ ಗುಜರಾತ್ ಭೇಟಿ ಸಂದರ್ಭದಲ್ಲಿ ಹೇಳಿದ್ದು ಗಾಂಧಿ ಹುಟ್ಟಿದ ಈ ನಾಡಿನಲ್ಲಿ ಹಾಲಿಗಿಂತ ಆಲ್ಕೋ ಹಾಲೇ ಜಾಸ್ತಿ ಹರಿಯುತ್ತಿದೆ. ಭ್ರಷ್ಟಾಚಾರ ಗಂಭೀರ ಸ್ವರೂಪದ್ದಾಗಿದೆ.

ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಸ್ವಪ್ರತಿಷ್ಠೆಯೇ ಎರಡೂ ಬಣಗಳಿಗೆ ಮುಖ್ಯವಾದಂತಿದೆ. ಪ್ರಧಾನಿ ಹಾಗೂ ನ್ಯಾಯಾಂಗವನ್ನು ಮಸೂದೆ ವ್ಯಾಪ್ತಿಯೊಳಗೆ ಸೇರಿಸಲು ಪರಿಶೀಲನಾ ಸಮಿತಿ ಬಯಸಿದ್ದಲ್ಲಿ ತಾನದಕ್ಕೆ ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಷ್ಟಕ್ಕೂ ಪರಿಶೀಲನಾ ಸಮಿತಿಯಲ್ಲಿ ಕೇವಲ ಕಾಂಗ್ರಸ್ಸಿಗರಿಲ್ಲ ಎಲ್ಲಾ ಪಕ್ಷಗಳ ಪ್ರತಿನಿಧಿಗಳೂ ಇದ್ದಾರೆ. ಸಮಿತಿಗೆ ಸಾಕಷ್ಟು ಕಾಲಾವಕಾಶ ಕೊಟ್ಟರೆ ಅದು ಜನಲೋಕಪಾಲ, ಸರ್ಕಾರಿ ಲೋಕಪಾಲ ಎರಡರಲ್ಲೂ ಒಳ್ಳೆಯ ಅಂಶಗಳನ್ನು ಗುರುತಿಸಿ ಒಗ್ಗೂಡಿಸಿ ಉತ್ತಮ ಮಸೂದೆಯಾಗಿ ರೂಪಿಸಬಹುದು. ಮಸೂದೆ ಅಂಶಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ತಾನು ಸಿದ್ದ ಎಂದು ಸರ್ಕಾರ ಹೇಳುತ್ತಿದ್ದರೂ ತನ್ನದೇ ವರದಿಯನ್ನು ಸಂಸತ್ ಅಂಗೀಕರಿಸಲೇಬೇಕೆಂದು ಹಠ ತೊಟ್ಟು ಸತ್ಯಾಗ್ರಹ ನಿರಶನಗಳ ದಾರಿ ಹಿಡಿದಿರುವ ಅಣ್ಣಾ ಟೀಂ ವಿವೇಚನಾ ಜ್ಞಾನದ ಕೊರತೆ ಕಾಣುತ್ತಿದೆ. ಮಸೂದೆ ಮೊದಲು ಕಾಯ್ದೆಯಾಗಲಿ ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ಕಾಯ್ದೆಯಲ್ಲಿ ತಿದ್ದುಪಡಿ ತರಬಹುದೆಂಬ ಸಾಮಾನ್ಯ ಜ್ಞಾನ ಕೂಡ ಸಿವಿಲ್ ಸೊಸೈಟಿಯ ಸದಸ್ಯರಿಗೆ ಇದ್ದಂತ್ತಿಲ್ಲ.

ಅತಿರಂಜಿತ, ಅವಾಸ್ತವಿಕ ಭಾವನೆಗಳಿಗೆ ಹತ್ತಿರವಿರಬಹುದಾದ ಜನಲೋಕಪಾಲ ಮಸೂದೆಗಿಂತ, ವಾಸ್ತವಿಕ ನೆಲೆಗಟ್ಟಿನ time tested ಆದ ಸರ್ಕಾರಿ ಲೋಕಪಾಲ ಉತ್ತಮವಿದೆ ಎಂಬ ಸಂಗತಿಯನ್ನು ಜನತೆಗೆ ಮನದಟ್ಟು ಮಾಡಿಕೊಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರ ಬದಲು ಅದರ ಬಾಯಿಬಡುಕ ಮಂತ್ರಿಗಳು ಅಣ್ಣಾ ಟೀಂನ ಹಿನ್ನಲೆಯನ್ನು ಕೆದಕಿಕೊಂಡು ಹೊರಟ್ಟಿದ್ದು ಕೇಂದ್ರ ಸರ್ಕಾರ ಎಲ್ಲೋ ಬೆಣೆ ಸಿಗಿಸಿಕೊಂಡ ಪ್ರಾಣಿಯ ತೆರದಲ್ಲಿ ವರ್ತಿಸುತ್ತಿದೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ಆಮರಣ ಉಪವಾಸ ನಡೆಸುವುದಾಗಿ ಹೇಳಿ ಹೊರಟ ಅಣ್ಣಾ ಟೀಂ ಅನ್ನು ಕೇಂದ್ರ ಸರ್ಕಾರ ನಡೆಸಿಕೊಂಡ ರೀತಿ ಮಾತ್ರ ಅದಕ್ಕೆ ಸೂಕ್ತ ವ್ಯೂಹ ರಚನೆ ಮಾಡುವಂತಹ ಮಾರ್ಗದರ್ಶಕರ ಕೊರತೆ ಕಾಡುತ್ತಿದೆ ಎಂಬುದಕ್ಕೆ ನಿದರ್ಶನ. ಉಗುರಿನಲ್ಲಿ ಚಿವುಟಿ ಹಾಕುವುದಕ್ಕೆ ಕೊಡಲಿಯನ್ನು ಬಳಸಿದಂತಿದೆ ಕೇಂದ್ರ ಸರ್ಕಾರ.

ಅಣ್ಣಾ ಬಂದನದ ಹೆಸರಿನಲ್ಲಿ ರಾಷ್ಟ್ರವ್ಯಾಪಿ ನಡೆದಿರುವ ಮೀಡಿಯಾ ಹೈಫ್‌ನಲ್ಲಿ ಜನತೆ ಸರ್ಕಾರ ಕಕ್ಕಾಬಿಕ್ಕಿಯಾಗಿದೆ. ತನ್ನ ಸಾಮ್ರಾಜ್ಯ ಧಾಹಕ್ಕೆ ಇರಾಕ್, ಈಜಿಪ್ಟ್, ಆಫ್‌ಘಾನಿಸ್ತಾನಗಳನ್ನು ಬಲಿತೆಗೆದುಕೊಂಡು ಸತತ ನರಮೇದ ನಡೆಸುತ್ತಿರುವ ದೊಡ್ಡಣ್ಣ ಅಮೆರಿಕಾ ಅಣ್ಣಾ ಚಳುವಳಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬ ಬುದ್ಧಿವಾದ ಹೇಳಲು ಮುಂದೆ ಬರುತ್ತಿದೆ. ಸರ್ಕಾರ ಹಾಗೂ ಸಿವಿಲ್ ಸೊಸೈಟಿ ನಡುವೆ ಯಾರೂ ನಿಜಕ್ಕೂ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಎಂದು ತಿರ್ಮಾನಿಸಲಾಗದೆ ಜನ ತಬ್ಬಿಬ್ಬಾಗಿದ್ದಾರೆ. ಮಹಾ ಕವಿ ಗೋಪಾಲ ಕೃಷ್ಣ ಅಡಿಗರನ್ನು ಸ್ಮರಿಸಿ ಹೇಳುವುದಾದರೆ ರಾಜಧಾನಿ ದೆಹಲಿ ಗೊಂದಲಪುರಿಯಾಗಿದೆ.